More

    ಕರೊನಾ ಲಸಿಕೆ ಪಡೆದುಕೊಂಡು ಸರ್ಕಾರಿ ಮಹಿಳಾ ಅಧಿಕಾರಿ ವಿರುದ್ಧ ನೆಟ್ಟಿಗರ ಆಕ್ರೋಶ..!

    ಕೊಲ್ಲಂ: ಕೇರಳದ ರಾಜ್ಯ ಯುವ ಆಯೋಗದ ಅಧ್ಯಕ್ಷರು ಕರೊನಾ ಲಸಿಕೆ ಪಡೆದುಕೊಂಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಿದ್ದಂತೆ ಜಾಲತಾಣದಲ್ಲಿ ಆಕ್ರೋಶದ ಕಿಡಿ ಹೊತ್ತಿಕೊಂಡಿದೆ.

    ಕರೊನಾ ಲಸಿಕೆಯ ಕೊರತೆಯಿಂದಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಚುಚ್ಚುಮದ್ದು ನೀಡಲು ರಾಜ್ಯ ಇನ್ನೂ ಸಹ ಮುಂದಾಗಿಲ್ಲ ಎಂದು ಹೇಳುವ ಮೂಲಕ ಅನೇಕ ನೆಟ್ಟಿಗರು, ಲಸಿಕೆ ಪಡೆದುಕೊಂಡಿರುವ 32 ವರ್ಷದ ರಾಜ್ಯ ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ವಿರುದ್ಧ ಕಿಡಿಕಾರಿದ್ದಾರೆ. ಹಿಂಬಾಲಿಗಿನಿಂದ ಲಸಿಕೆ ಪಡೆದ ಫಲಾನುಭವಿ ಎಂದು ನೆಟ್ಟಿಗರು ಜರಿದಿದ್ದಾರೆ.

    ಇದರ ಬೆನ್ನಲ್ಲೇ ಕೊಲ್ಲಂನ ವಕೀಲರಾದ ಬೊರಿಸ್​ ಪೌಲ್​, ಜೆರೊಮ್​ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ದೂರಿನ ಜತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋಗಳನ್ನು ಲಕೋಟೆಯಲ್ಲಿ ಕಳುಹಿಸಿದ್ದಾರೆ.

    18 ರಿಂದ 45 ವರ್ಷದೊಳಗಿನವರಿಗೆ ಕರೊನಾ ಲಸಿಕೆ ನೀಡುವುದು ವಿಳಂಬವಾಗಲಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದ ಬಳಿವೂ ಜೆರೋಮ್‌ ಲಸಿಕೆ ಹಾಕಿಸಿಕೊಂಡಿರುವುದು ಗಂಭೀರ ವಿಷಯವಾಗಿದೆ ಎಂದು ವಕೀಲ ಪೌಲ್​ ಹೇಳಿದರು.

    ಸೂಕ್ತ ಕ್ರಮ ಕೈಗೊಳ್ಳಲು ದೂರನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪೌಲ್​ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದೆ.

    ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಜೆರೋಮ್, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಆಧಾರದ ಮೇಲೆ ಲಸಿಕೆಯನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ. ಎಲ್ಲ ಸರ್ಕಾರಿ ನೌಕರರಿಗೆ ಕರೊನಾ ಲಸಿಕೆ ನೀಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ಸಮರ್ಥನೆ ನೀಡಿದರು. ಲಸಿಕೆ ಪಡೆಯಲು ಆನ್​ಲೈನ್​ನಲ್ಲಿ ನೋಂದಣಿ ಸಹ ಮಾಡಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆಗೆ ಮೀನಮೀಷ: ಕೇಂದ್ರದ ವಿರುದ್ಧ ಸುಪ್ರೀಂ ಗರಂ- ಕೂಡಲೇ ಬಿಡುಗಡೆಗೆ ಆದೇಶ

    ಅಗಲಿದ ನಟನ ಶೋಕಾಚರಣೆ ವೇಳೆ ಸಭೆಯ ನಡುವೆ ಅಧ್ಯಕ್ಷನ ನೆಕ್ಕಿದ ನಾಯಿಗಳು- ವಿಡಿಯೋ ವೈರಲ್‌

    ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ, ನನಗೇನು ಆಗಿಲ್ಲ, ಚೆನ್ನಾಗಿದ್ದೇನೆ: ಹುಲಿಕಲ್​ ನಟರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts