More

    ಕಾನೂನು ಬದಲಾಯಿಸಿ, ನೀವೇ ಚ್ಯಾನ್ಸಲರ್​ ಆಗಿಬಿಡಿ: ಸಿಎಂಗೆ ರಾಜ್ಯಪಾಲರ ಸಲಹೆ!

    ತಿರುವನಂತಪುರಂ: ಕೇರಳದ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯಪ್ರೇರಿತ ನೇಮಕಾತಿಗಳನ್ನು ಮಾಡುತ್ತಿರುವ ಬಗ್ಗೆ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್​​ಗೆ ನಾಲ್ಕು ಪುಟಗಳ ಪತ್ರ ಬರೆದಿರುವ ವಿವಿಗಳ ಕುಲಪತಿಗಳಾದ ರಾಜ್ಯಪಾಲರು, “ನೀವೇ ಕುಲಪತಿಗಳ ಹುದ್ದೆ ಸ್ವೀಕರಿಸಿಬಿಡಿ. ಆಗ ಯಾರೂ ರಾಜಕೀಯ ಹಸ್ತಕ್ಷೇಪದ ಬಗ್ಗೆ ಮಾತನಾಡುವುದೂ ಇಲ್ಲ” ಎಂದು ಕಟುವಾಗಿ ನುಡಿದಿದ್ದಾರೆ.

    ಇತ್ತೀಚಿನ ಕಣ್ಣೂರು ವಿವಿಯ ಉಪಕುಲಪತಿಗಳ ಮರುನೇಮಕಾತಿ ಸೇರಿದಂತೆ ವಿವಿಗಳ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ರಾಜ್ಯಪಾಲರು, ತಮಗೆ ಕಾನೂನುಬದ್ಧವಾಗಿ ಸೂಕ್ತ ಎನಿಸದಿದ್ದರೂ, ಹಲವು ನಿರ್ಣಯಗಳಿಗೆ ಸರ್ಕಾರದ ಪರವಾಗಿ ಮೊಹರು ಹಾಕಬೇಕಾಗುತ್ತಿರುವುದು ಇಕ್ಕಟ್ಟು ಉಂಟುಮಾಡಿದೆ ಎಂದಿದ್ದಾರೆ.

    ಇದನ್ನೂ ಓದಿ: ತಂದೆಯ ಕಣ್ಣೆದುರೇ ಸಾವಿಗೀಡಾದ ಮಗಳು; ಲಾರಿ-ಬೈಕ್​ ಅಪಘಾತ, ಚಾಲಕ ಪರಾರಿ..

    “ನಿಮಗೆ ನನ್ನ ಸಲಹೆಯೇನೆಂದರೆ, ವಿವಿಗಳ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನೀವೇ ಖುದ್ದಾಗಿ ಕುಲಪತಿಯ ಹುದ್ದೆ ಅಲಂಕರಿಸಿ. ಇದರಿಂದ ನಿಮ್ಮ ರಾಜಕೀಯ ಉದ್ದೇಶಗಳನ್ನು ರಾಜ್ಯಪಾಲರ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಈಡೇರಿಸಿಕೊಳ್ಳಬಹುದು” ಎಂದು ಖಾನ್​ ಬರೆದಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

    ಮತ್ತಷ್ಟು ರೋಮಾಂಚಕ ಫೋಟೋಗಳು: ‘ಮೆಹೆಂದಿ’ಯಲ್ಲಿ ಮೂಡಿಬಂದ ‘ವಿಕತ್ರಿನಾ’ ಕೆಮಿಸ್ಟ್ರಿ!

    22 ವರ್ಷದ ಮಗಳ ಸೋಗು ಹಾಕಿದ 48ರ ಮಹಿಳೆ! ಕಾಲೇಜು ಸೇರಿ ಯುವಕರೊಂದಿಗೆ ಸರಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts