More

    ಕರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದವನಿಗೆ ಖುಲಾಯಿಸಿದ ಅದೃಷ್ಟ…!

    ಒಂದು ವರ್ಷದ ಹಿಂದಷ್ಟೇ ದಂಪತಿ ಹೊಸ ಕನಸುಗಳೊಂದಿಗೆ ವಿದೇಶಕ್ಕೆ ಕಾಲಿಟ್ಟಿದ್ದರು. ಆದರೆ, ಕರೊನಾ ಸಂಕಷ್ಟ ಪತಿಯ ಉದ್ಯೋಗವನ್ನೇ ಕಸಿದಿತ್ತು. ಆದರೆ, ಅದೃಷ್ಟ ಅವರ ಕೈ ಹಿಡಿದಿದೆ.

    ಕೇರಳದ ಕೊಟ್ಟಾಯಂ ಜಿಲ್ಲೆಯ ವೊಲ್ಲೂರಿನ ಶಿಬು ಪೌಲ್​ ಹಾಗೂ ಲಿನ್ನೆಟ್​ ಜೋಸೆಫ್​ ಒಂದು ವರ್ಷದ ಹಿಂದೆ ಬ್ರಿನ್​ಗೆ ತೆರಳಿದ್ದರು. ಆರಂಭದಲ್ಲಿ ಕೆಂಬ್ರಿಡ್ಜ್​ನಲ್ಲಿ ನೆಲೆಸಿದ್ದ ಅವರು, ಸದ್ಯ ನಾಟಿಂಗ್​ಹ್ಯಾಮ್ ನಿವಾಸಿಗಳಾಗಿದ್ದಾರೆ.

    ಇದನ್ನೂ ಓದಿ; ನೀಲಿ ಮಸೀದಿಯಾಗುತ್ತಿದೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ….!

    ಶಿಬು ಸೌಂಡ್​ ಇಂಜಿನಿಯರ್​ ಆಗಿದ್ದರೆ, ಪತ್ನಿ ಲಿನ್ನೆಟ್​ ನಾಟಿಂಗ್​ಹ್ಯಾಮ್​ ಸಿಟಿ ಆಸ್ಪತ್ರೆಯಲ್ಲಿ ನರ್ಸ್​ ಕೆಲಸ ಮಾಡುತ್ತಿದ್ದಾರೆ. ಕರೊನಾ ಸಂಕಷ್ಟದಿಂದ ಶಿಬು ಕೆಲಸ ಕಳೆದುಕೊಂಡಿದ್ದರು. ಉದ್ಯೋಗ ಅರಸಿ ಕೆಲ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದರು. ಅವರಿಂದ ಫೋನ್​ ಕರೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಅಚ್ಚರಿಯೊಂದು ಕಾದಿತ್ತು.

    ಈ ನಡುವೆ, ಬೆಸ್ಟ್​ ಆಫ್​ ದಿ ಬೆಸ್ಟ್​ ಲೈಫ್​ಸ್ಟೈಲ್​ ಸ್ಪರ್ಧೆಯ ಮೂರು ಟಿಕೆಟ್​ಗಳನ್ನು ಅವರ ಖರೀದಿಸಿದ್ದರು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆ ಬಳಿ ಬಂದು ಅವರಿಗಾಗಿ ಕಾದಿದ್ದರು. ಕೆಳಗಿಳಿದು ಬಂದಾಗ ಲ್ಯಾಂಬೋರ್ಗಿನಿ ಕಾರು ಅಲ್ಲಿತ್ತು. ನಿಮ್ಮ ಖರೀದಿಸಿದ ಟಿಕೆಟ್​ಗೆ ಬಂದ ಬಹುಮಾನವಿದು ಎಂದಾಗ ಅವರಿಗೆ ನಂಬಿಕೆಯೇ ಬರಲಿಲ್ಲ.

    ಇದನ್ನೂ ಓದಿ; ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!

    ಅದಲ್ಲದೇ, ಇನ್ನೊಂದು ಟಿಕೆಟ್​ಗೆ 20 ಸಾವಿರ ಪೌಂಡ್​ ನಗದು (ಅಂದಾಜು 20 ಲಕ್ಷ ರೂ.) ಬಹುಮಾನ ಬಂದಿದೆ ಎಂದಾಗ ಮತ್ತಷ್ಟು ಅಚ್ಚರಿಗೆ ಒಳಗಾದರು.
    ಇದೆಲ್ಲ ದೇವರ ದಯೆ ಎಂದಿರುವ ದಂಪತಿ, 1.85 ಕೋಟಿ ರೂ. ಮೌಲ್ಯದ ಕಾರಿನ ಬದಲು ನಗದು ಬಹುಮಾನವನ್ನೇ ಪಡೆಯಲು ನಿರ್ಧರಿಸಿದ್ದಾರೆ. ನಾಟಿಂಗ್​ಹ್ಯಾಮ್​ನಲ್ಲಿ ಮನೆ ಖರೀದಿಸುವ ಉದ್ದೇಶ ಹೊಂದಿದ್ದಾರೆ.

    ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts