More

    ಮಸೀದಿಯಾಗಿ ಮಾರ್ಪಡುತ್ತಿದೆ 6ನೇ ಶತಮಾನದ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ…!

    ನವದೆಹಲಿ: ಟರ್ಕಿಯ ರಾಜಧಾನಿ ಇಸ್ತಾನ್​ಬುಲ್​ನಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ ವಿಶ್ವ ಪಾರಂಪರಿಕ ತಾಣ ಹಗಿಯಾ ಸೋಫಿಯಾ ಸದ್ಯ ವಸ್ತು ಸಂಗ್ರಹಾಲಯವಾಗಿದೆ. ಇದರ ವಾಸ್ತುಶಿಲ್ಪವನ್ನು ನೋಡಲೆಂದು ಪ್ರತಿವರ್ಷ ಲಕ್ಷಾಂತರ ಜನರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ.

    ಆದರೆ, ಈಗ ಇದು ವಿವಾದಕ್ಕೀಡಾದ ತಾಣವಾಗಿ ಪರಿಣಮಿಸಿದೆ. ಏಕೆಂದರೆ, ಇದನ್ನು ಮಸೀದಿಯಾಗಿ ಪರಿವರ್ತಿಸಲು ಮುಸ್ಲಿಂ ಬಾಹುಳ್ಯದ ಟರ್ಕಿ ಸರ್ಕಾರ ಮುಂದಾಗಿದೆ. ಟರ್ಕಿಯ ಉನ್ನತ ಆಡಳಿತಾತ್ಮಕ ನ್ಯಾಯಾಲಯ ಇದಕ್ಕೆ ಅನುಮತಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ; ಪಾಕಿಸ್ತಾನದ ಪೈಲಟ್​ಗಳ ಮೇಲೂ ಅಮೆರಿಕಕ್ಕೆ ಇಲ್ಲ ನಂಬಿಕೆ; ವಿಮಾನ ಸಂಚಾರಕ್ಕಿದ್ದ ಪರವಾನಗಿ ರದ್ದು 

    ಆರನೇ ಶತಮಾನಕ್ಕೆ ಸೇರಿದ ಹಗಿಯಾ ಸೋಫಿಯಾ ಗ್ರೀಕ್​ ಆರ್ಥೋಡಾಕ್ಸ್​ ಕ್ರೈಸ್ತರ ಕಾಲದಲ್ಲಿ ಪಿತೃಪ್ರಧಾನ ಕ್ಯಾಥಡ್ರಲ್​ ಆಗಿತ್ತು. ಒಟ್ಟೊಮಾನ್​ ತುರ್ಕರ ಕಾಲದಲ್ಲಿ ಮಸೀದಿಯಾಗಿ ಬಳಕೆಯಲ್ಲಿತ್ತು. ಗೋಡೆಗಳಲ್ಲಿರುವ ಚಿತ್ತಾರದ ನೀಲಿ ಬಣ್ಣದ ಟೈಲ್ಸ್​ಗಳಿಂದಾಗಿ ಇದನ್ನು ನೀಲಿ ಮಸೀದಿ ಎಂದೂ ಕರೆಯಲಾಗುತ್ತಿತ್ತು. 1935ರಲ್ಲಿ ಇದನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಸಲಾಗಿತ್ತು. ಇದಕ್ಕೆ ವಿಶ್ವ ಪಾರಂಪರಿಕ ತಾಣವೆಂಬ ಮಾನ್ಯತೆಯನ್ನು ಯುನೆಸ್ಕೋ ನೀಡಿತ್ತು.

    ಈ ವಸ್ತು ಸಂಗ್ರಹಾಲಯವನ್ನು ಮತ್ತೆ ಮಸೀದಿಯಾಗಿ ಪರಿವರ್ತಿಸುವ ಯತ್ನ ನಡೆದಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಈಗ ನ್ಯಾಯಾಲಯದ ಸಮ್ಮತಿಯೇ ದೊರೆಯುತ್ತಿರುವ ಕಾರಣ ಮಸೀದಿಯಾಗಿ ಮಾರ್ಪಡಿಸಲಾಗುತ್ತಿದೆ.

    ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…! 

    ಆದರೆ, ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದ ಬಳಿಕ ಯಾವುದೇ ಬದಲಾವಣೆ ಮಾಡುವುದಿದ್ದಲ್ಲಿ ಯುನೆಸ್ಕೋಗೆ ಮುಂಚಿತವಾಗಿ ತಿಳಿಸಬೇಕು. ಬದಲಾವಣೆಗಳಿಂದ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತಿಲ್ಲ. ಇಂಥ ಬದಲಾವನೆಗಳನ್ನು ಮಾಡಿದ್ದೇ ಆದಲ್ಲಿ ಮಾನ್ಯತೆ ಕಳೆದುಕೊಳ್ಳಲಿದೆ ಎಂದು ಯುನೆಸ್ಕೋ ಎಚ್ಚರಿಕೆ ನೀಡಿದೆ.

    ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts