More

    ವಿಶ್ವ ರೆಡ್​ ಕ್ರಾಸ್​ನಿಂದ ಪೌಷ್ಠಿಕ ಆಹಾರ ಕಿಟ್​ ವಿತರಣೆ

    ವಿಜಯಪುರ: ನಗರದ ಭಾರತೀಯ ರೆಡ್​ ಕ್ರಾಸ್​ ಸೊಸೈಟಿ ಜಿಲ್ಲಾ ಶಾಖೆಯಲ್ಲಿ ಬುಧವಾರ ವಿಶ್ವ ರೆಡ್​ ಕ್ರಾಸ್​ ದಿನಾಚರಣೆ ಆಚರಿಸಿ ವಿಶ್ವ ರೆಡ್​ ಕ್ರಾಸ್​ ಸಂಸ್ಥೆ ಸಂಸ್ಥಾಪಕ ಜಿನ ಹೆನ್ರಿ ಡೊನಂಟ್​ರವರು ವಿಶ್ವಕ್ಕೆ ನೀಡಿದ ಕೊಡುಗೆ ಸ್ಮರಿಸಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಎರಡು ದಿನದ ಜನ ಹಿತ ಕಾರ್ಯಕ್ರಮ ಕೈಗೊಳ್ಳಲಾಯಿತು.

    ರೆಡ್​ ಕ್ರಾಸ್​ ಸಂಸ್ಥೆ ಅಂಗ ಸಂಸ್ಥೆಯಾದ ಜ್ಯೂ. ರೆಡ್​ ಕ್ರಾಸ್​ ಟಕದಿಂದ ನಗರದ ರೂಪಾದೇವಿ ಸ್ಕೂಲ್​ ಮಕ್ಕಳಿಂದ ಜಾಗತಿಕ ಶಾಂತಿ, ಸಾರ್ವಜನಿಕ ಆರೋಗ್ಯ ಮತ್ತು ನಿರ್ಮಲ ವಾತಾವರಣಕ್ಕಾಗಿ ನಗರದ ನಾಲ್ಕು ಸ್ಮಾರಕಗಳ ಮುಂಭಾಗದಲ್ಲಿ ಭಿತ್ತಿ ಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

    ತಾಲೂಕಿನ ಶಿರನಾಳ ಗ್ರಾಮದಲ್ಲಿ ಗುರುವಾರ ರೆಡ್​ ಕ್ರಾಸ್​ ಸಂಸ್ಥೆ, ಬಿದರಿಯವರ ಚಿಕ್ಕಮಕ್ಕಳ ಆಸ್ಪತ್ರೆ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು.

    ಶಿಬಿರದಲ್ಲಿ ಸಿರೋಗ ತಜ್ಞೆ ಡಾ. ಪ್ರಿಯದರ್ಶಿನಿ ಪಾಟೀಲ, ಚಿಕ್ಕ ಮಕ್ಕಳ ತಜ್ಞ ಡಾ. ಎಲ್​.ಎಚ್​. ಬಿದರಿ, ಡಾ. ಬಸವರಾಜ ಉಟಗಿ, ಆಥೋರ್ಪಿಡಿಕ್​ ಡಾ. ಸಂದೀಪ ನಾಯಕ ಹಾಗೂ ಮತ್ತಿತರರ ಪರೀಣಿತ ವೈದ್ಯರಿದ್ದರು. ಸುಮಾರು 286 ರೋಗಿಗಳಿಗೆ ತಪಾಸಣೆ ನಡೆಸಲಾಯಿತು.

    ನಂತರ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ 41 ಜನರು ರಕ್ತದಾನ ಮಾಡಿದರು. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ 100 ಮಹಿಳೆಯರಿಗೆ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆಯಿಂದ ಪೌಷ್ಠಿಕ ಆಹಾರ ಕಿಟ್​ ವಿತರಿಸಲಾಯಿತು.

    ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಶಿರನಾಳ ಗ್ರಾಮದ ಮಠದ ಶಾಲೆಯ ಆವರಣದಲ್ಲಿ 80 ಗಿಡಗಳನ್ನು ಗ್ರಾಮಸ್ಥರ ನೆರವಿನಿಂದ ನಡೆಸಲಾಯಿತು. ವಿಶ್ವ ರೆಡ್​ ಕ್ರಾಸ್​ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಜಿಲ್ಲಾ ಚೇರ್ಮನ್​ ಶರದ ರೊಡಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts