More

    ಕೇರಳದಿಂದ ಕರೊನಾ ಜಾಡು: 100 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟೀವ್!

    ಹಾಸನ : ಹಾಸನದಲ್ಲಿ 9 ವಿವಿಧ ನರ್ಸಿಂಗ್ ಕಾಲೇಜುಗಳ 100 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ನಗರದ ಖಾಸಗಿ ಕಾಲೇಜಿಗೆ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟ ನಂತರ ನಡೆಸಲಾಗುತ್ತಿರುವ ಕರೊನಾ ಪರೀಕ್ಷೆಗಳಲ್ಲಿ ಈ ಸಂಗತಿ ತಿಳಿದುಬಂದಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್​ ಹೇಳಿದ್ದಾರೆ.

    ಹಾಸನದ ಖಾಸಗಿ ನರ್ಸಿಂಗ್ ಕಾಲೇಜೊಂದಕ್ಕೆ ಜುಲೈ 17 ರಿಂದ 21 ರ ನಡುವೆ ಕೇರಳದಿಂದ ಬಂದ 48 ವಿದ್ಯಾರ್ಥಿಗಳಲ್ಲಿ 21 ಜನರಿಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿತ್ತು. ಅವರೆಲ್ಲರೂ ಏಸಿಮ್ಟೊಮ್ಯಾಟಿಕ್​ ಆಗಿದ್ದು, ಖಾಸಗಿ ಕೋವಿಡ್ ಕೇರ್​ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರವಾಹದಿಂದ 7,800 ಕೋಟಿ ರೂ. ಹಾನಿ

    ಈ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಜನರನ್ನು ಪತ್ತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ 9 ನರ್ಸಿಂಗ್ ಕಾಲೇಜುಗಳಲ್ಲಿ 900 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಒಟ್ಟು 100 ಜನ ವಿದ್ಯಾರ್ಥಿಗಳಿಗೆ ಈವರೆಗೆ ಪಾಸಿಟೀವ್ ಬಂದಿದೆ ಎಂದು ಡಾ.ವಿಜಯ್​ ಹೇಳಿದ್ದಾರೆ. (ಏಜೆನ್ಸೀಸ್)

    ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ

    ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts