ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಕುಸ್ತಿಪಟು ಬಜರಂಗ್​ ಪೂನಿಯ ದೇಶಕ್ಕೆ ಮತ್ತೊಂದು ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್​ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್​ ನಿಯಾಜ್​ಬೆಕಾವ್​ ವಿರುದ್ಧ 8-0 ಸ್ಕೋರ್​ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 6 ಪದಕಗಳು ಲಭಿಸಿದ ಹಾಗಾಗಿದೆ. ಸೆಮಿಫೈನಲ್ಸ್​ನಲ್ಲಿ ಇರಾನಿನ ಹಾಜಿ ಅಲಿಯೇವ್​ ವಿರುದ್ಧ ಸೋತಿದ್ದ ಬಜರಂಗ್​ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ … Continue reading ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ