More

    ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ

    ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಕುಸ್ತಿಪಟು ಬಜರಂಗ್​ ಪೂನಿಯ ದೇಶಕ್ಕೆ ಮತ್ತೊಂದು ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್​ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್​ ನಿಯಾಜ್​ಬೆಕಾವ್​ ವಿರುದ್ಧ 8-0 ಸ್ಕೋರ್​ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ.

    ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 6 ಪದಕಗಳು ಲಭಿಸಿದ ಹಾಗಾಗಿದೆ.

    ಸೆಮಿಫೈನಲ್ಸ್​ನಲ್ಲಿ ಇರಾನಿನ ಹಾಜಿ ಅಲಿಯೇವ್​ ವಿರುದ್ಧ ಸೋತಿದ್ದ ಬಜರಂಗ್​ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತಮ ಆಟಗಾರಿಕೆ ಪ್ರದರ್ಶಿಸಿ, ಭಾರತಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ. (ಏಜೆನ್ಸೀಸ್)

    ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ವೀಕೆಂಡ್​ ಕರ್ಫ್ಯೂ ಲೆಕ್ಕಿಸದೆ ವ್ಯಾಪಾರ, ಓಡಾಟ! ಪೊಲೀಸರಿಗೆ ಕಸರತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts