More

    ಕೇರಳದಲ್ಲಿ ಕರೊನಾ ವೈರಸ್​ ಸಮುದಾಯಕ್ಕೆ ಹರಡಿದೆಯೇ? ಸಾರ್ವಜನಿಕರಲ್ಲಿ ಅಧಿಕಗೊಂಡ ಭೀತಿ

    ತಿರುವನಂತಪುರ: ಕೇರಳದಲ್ಲಿ ಕರೊನಾ ವೈರಸ್​ ಸೋಂಕು ಸಮುದಾಯಕ್ಕೆ ಹರಡಿದಿದೆ ಎನ್ನುವ ಭೀತಿ ಜನರಲ್ಲಿ ವ್ಯಾಪಕವಾಗಿದೆ.

    ರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಹಾಗೂ ರಾಜ್ಯದಲ್ಲಿ 25 ಮಂದಿ ರೋಗಿಗಳ ಸೋಂಕು ಹರಡುವಿಕೆಯ ಮೂಲ ಪತ್ತೆಯಾಗದ ಹಿನ್ನೆಲೆಯಲ್ಲಿ ಜನರಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎನ್ನುವ ಭೀತಿಗೆ ಕಾರಣವಾಗಿದೆ. ಕೇರಳದಲ್ಲಿ 4 ತಿಂಗಳ ಮಗು ಸೋಂಕಿಗೆ ಬಲಿಯಾಗಿರುವುದರಿಂದ  ಸಾರ್ವಜನಿಕರು ಭಯಗೊಂಡಿದ್ದಾರೆ.

    ಸಮುದಾಯಕ್ಕೆ ಸೋಂಕು ನಿರಾಕರಿಸಿದ ಸಚಿವೆ: ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ಸಮುದಾಯಕ್ಕೆ ಹರಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಗಮನ ಹರಿಸುತ್ತಿದೆ. ಸಮುದಾಯಕ್ಕೆ ಹರಡಿರುವ ಸೂಚನೆ ಇದುವರೆಗೆ ಬಂದಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಹೇಳಿದ್ದಾರೆ.

    ಆರೋಗ್ಯ ಇಲಾಖೆ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರೊನಾ ಹಾಟ್​ಸ್ಪಾಟ್​ಗಳು ಇತರ ಭಾಗಗಳ ಮೇಲೆ ನಿಗಾ ವಹಿಸಿದ್ದೇವೆ. ಈಗಲೇ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹೇಳಲು ಸಾಧ್ಯವಿಲ್ಲ ಇನ್ನಷ್ಟು ದಿನಗಳ ನಂತರ ತಿಳಿಯಲಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
    ಕೇರಳದ ಕೊಲ್ಲಂ, ಕೊಟ್ಟಾಯಂ, ಇಡುಕ್ಕಿ ಮತ್ತು ಕೋಜಿಕೋಡ್​ ಜಿಲ್ಲೆಗಳಲ್ಲಿ ಐದು ದಿನಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಇಡುಕ್ಕಿ ಜಿಲ್ಲಿಯಲ್ಲಿ ಎಲ್ಲ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹೀಗಿದ್ದರೂ ಇಡುಕ್ಕಿಯಲ್ಲಿ ಲಾಕ್​ಡೌನ್​ ಸಿಡಿಲಗೊಳಿಸಿಲ್ಲ. ಹಾಟ್​ಸ್ಪಾಟ್​ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿನಿಂದ ಚೇತರಿಸಿಕೊಂಡ ಪ್ರಧಾನಿ ಕೆಲಸಕ್ಕೆ ಹಾಜರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts