More

    ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಏರ್​ಲೈನ್ಸ್​ ಸಿಬ್ಬಂದಿ ಎಡವಟ್ಟು: ಪ್ರಯಾಣಿಕರನ್ನು ಟರ್ಮಿನಲ್​ನಲ್ಲೇ ಬಿಟ್ಟು ಟೇಕಾಫ್​ ಆದ ವಿಮಾನ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಲೈನ್ಸ್​ ಸಿಬ್ಬಂದಿ ಎಡವಟ್ಟು ಮಾಡಿದ್ದು, ಪ್ರಯಾಣಿಕರನ್ನು ಟರ್ಮಿನಲ್​ನಲ್ಲೇ ಬಿಟ್ಟು ವಿಮಾನ ಟೆಕ್ ಆಪ್ ಆದ ಘಟನೆ ವರದಿಯಾಗಿದೆ.

    ಒಂದು ಬಸ್​ನಲ್ಲಿ ಬರುತ್ತಿದ್ದ 54 ಜನ ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದೆ. ಈ ಘಟನೆ ನಿನ್ನೆ (ಜ.9) ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ G8 116 ನಂಬರ್​ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್​​ನಲ್ಲಿ ವಿಮಾನಕ್ಕೆ‌ ಬಸ್​ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು.

    ಎರಡನೇ ಟ್ರಿಪ್​​ನಲ್ಲಿ 54 ಜನರನ್ನು ಟರ್ಮಿನಲ್​​ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್​ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್​ ಆಗಿದೆ. ಪ್ರಯಾಣಿಕರನ್ನು ಗಮನಿಸದೆ ಏರ್​ಲೈನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್​ಲೈನ್ಸ್​ ವಿರುದ್ಧ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತ ಟ್ವಿಟರ್​ನಲ್ಲಿ ಗೋಫಸ್ಟ್ ಮತ್ತು ಡಿಜಿಸಿಎಗೆ 50 ಕ್ಕೂ ಅಧಿಕ‌ ಪ್ರಯಾಣಿಕರು ಟ್ವೀಟ್​ ಮಾಡಿ ಸಮಯಕ್ಕೆ ಸರಿಯಾಗಿ ಹೋಗಲು ಆಗಿಲ್ಲ ಅಂತ ಬೇಸರ ಹೊರಹಾಕಿದ್ದಾರೆ. ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಟ್ವಿಟರ್​ನಲ್ಲಿ ಗೋಫಸ್ಟ್ ಸಂಸ್ಥ ಕ್ಷಮೆ ಕೇಳಿದೆ. ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಏರ್​ಲೈನ್ಸ್​ ಸಂಸ್ಥೆ ಟ್ವೀಟ್​ ಮಾಡಿ ಕ್ಷಮೆ ಕೇಳಿದೆ. (ಏಜೆನ್ಸೀಸ್​)

    ಒಂಟಿ ತಾಯಿಯ ಒತ್ತಡದ ಜೀವನ

    ಮಾಸ್ಕೋದಿಂದ ಗೋವಾಗೆ ಆಗಮಿಸುತ್ತಿದ್ದ ವಿಮಾನಕ್ಕೆ ಬಾಂಬ್​ ಬೆದರಿಕೆ: ಗುಜರಾತ್​ನಲ್ಲಿ ತುರ್ತು ಭೂಸ್ಪರ್ಶ

    ಪ್ಯಾಂಟ್​ ಧರಿಸದೇ ಲಂಡನ್​ ನಗರದಲ್ಲಿ ಓಡಾಡಿದ ಜನರ ಫೋಟೊ ವೈರಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts