ಮಾಸ್ಕೋದಿಂದ ಗೋವಾಗೆ ಆಗಮಿಸುತ್ತಿದ್ದ ವಿಮಾನಕ್ಕೆ ಬಾಂಬ್​ ಬೆದರಿಕೆ: ಗುಜರಾತ್​ನಲ್ಲಿ ತುರ್ತು ಭೂಸ್ಪರ್ಶ

ಅಹಮದಾಬಾದ್​: ಬಾಂಬ್​ ಬೆದರಿಕೆ ಕರೆ ಹಿನ್ನೆಲೆಯಲ್ಲಿ ರಷ್ಯಾ ರಾಜಧಾನಿ ಮಾಸ್ಕೋದಿಂದ ಗೋವಾಗೆ ಆಗಮಿಸುತ್ತಿದ್ದ 244 ಪ್ರಯಾಣಿಕರಿದ್ದ ಚಾರ್ಟೆಡ್​ ವಿಮಾನವು ಗುಜರಾತ್​ನ ಜಾಮ್​ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ. ಗೋವಾದ ಏರ್​ ಟ್ರಾಫಿಕ್​ ಕಂಟ್ರೋಲರ್​ ಬಾಂಬ್​​ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಜಾಮ್​ನಗರದಲ್ಲೇ ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿ 8 ಸಿಬ್ಬಂದಿ ಸೇರಿದಂತೆ ಒಟ್ಟು 244 ಪ್ರಯಾಣಿಕರಿದ್ದರು. ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ಪೊಲೀಸ್​ ಮತ್ತು ಬಾಂಬ್​ ಪತ್ತೆ ಮತ್ತು ನಿಷ್ಕ್ರಿಯ ದಳದೊಂದಿಗೆ ಸ್ಥಳೀಯ ಅಧಿಕಾರಿಗಳು ವಿಮಾನವನ್ನು … Continue reading ಮಾಸ್ಕೋದಿಂದ ಗೋವಾಗೆ ಆಗಮಿಸುತ್ತಿದ್ದ ವಿಮಾನಕ್ಕೆ ಬಾಂಬ್​ ಬೆದರಿಕೆ: ಗುಜರಾತ್​ನಲ್ಲಿ ತುರ್ತು ಭೂಸ್ಪರ್ಶ