More

    ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ: ಟ್ರಂಪ್​ಗೆ ಪೊಲೀಸ್​ ಚೀಫ್​​ ತೀಕ್ಷ್ಣ ಪ್ರತಿಕ್ರಿಯೆ

    ವಾಷಿಂಗ್ಟನ್​: ಅಮೆರಿಕದಲ್ಲಿ ಒಂದೆಡೆ ಕೊವಿಡ್​-19 ಇನ್ನಿಲ್ಲದಂತೆ ಕಾಡುತ್ತಿದ್ದರೆ, ಮತ್ತೊಂದೆಡೆ ಈಗ ಜನಾಂಗೀಯ ದ್ವೇಷದ ಕಿಚ್ಚು ಆವರಿಸಿದೆ. ಕಪ್ಪುವರ್ಣೀಯನಾದ ಜಾರ್ಜ್​ ಫ್ಲಾಯ್ಡ್​ನನ್ನು ಮೂವರು ಅಮೆರಿಕದ ಶ್ವೇತವರ್ಣೀಯ ಪೊಲೀಸರು ಹತ್ಯೆ ಮಾಡಿದ್ದೇ ಈ ಉಗ್ರ ಪ್ರತಿಭಟನೆಗೆ ಕಾರಣ.

    ಅಮೆರಿಕದ ಹಲವು ರಾಜ್ಯಗಳ 140ಕ್ಕೂ ಅಧಿಕ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಬಂಕರ್ ಸೇರಿದ್ದರೂ, ಟ್ವಿಟರ್ ಮೂಲಕ ಪ್ರತಿಭಟನಾಕಾರರ ನಿಂದನೆಯಲ್ಲಿ ತೊಡಗಿದ್ದಾರೆ. ನಿಮ್ಮನ್ನು ಹತ್ತಿಕ್ಕಲು ಸೇನೆಗಳನ್ನು ಕರೆಸಬೇಕಾಗುತ್ತದೆ ಎಂದು ನಿನ್ನೆಯಷ್ಟೇ ವಾರ್ನ್​ ಮಾಡಿದ್ದ ಟ್ರಂಪ್​ ಅವರು ಇಂದು ಬೆಳಗ್ಗೆ ಪ್ರತಿಭಟನೆ ನಡೆಯುತ್ತಿರುವ ರಾಜ್ಯಗಳ ರಾಜ್ಯಪಾಲರಿಗೆ ವಿಡಿಯೋ ಕಾಲ್​ ಮಾಡಿ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ: ಜನಾಂಗೀಯ ಕಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆರಿಕ

    ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ಇಂದು ಕಾನ್ಫರೆನ್ಸ್​ ಕಾಲ್​ ಮಾಡಿದ ಟ್ರಂಪ್, ಜಾರ್ಜ್​ ಫ್ಲಾಯ್ಡ್​ ಹತ್ಯೆ ವಿರುದ್ಧ ನಿಮ್ಮ ರಾಜ್ಯಗಳಲ್ಲಿ ನಡೆಯುತ್ತಿರುವ ಉಗ್ರ ಪ್ರತಿಭಟನೆಯನ್ನು ಹತ್ತಿಕ್ಕಿ. ನಿಮ್ಮ ಅಧಿಕಾರ ಬಳಸಿ ನಿಯಂತ್ರಿಸಿ. ನಿಮ್ಮ ಕೈಲಿ ಪ್ರತಿಭಟನಾಕಾರರನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ, ನೀವೆಲ್ಲ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದೀರಿ ಎಂದೇ ಅರ್ಥ ಎಂದು ಹೇಳಿದ್ದರು.

    ಈಗಾಗಲೇ ಟ್ವಿಟರ್​ಗಳ ಮೂಲಕ ಬೈದು, ನಿಂದಿಸಿ ಪ್ರತಿಭಟನಾಕಾರರನ್ನು ಮತ್ತಷ್ಟು ಪ್ರಚೋದನೆ ಮಾಡಿರುವ ಟ್ರಂಪ್​ ಇಂದು ಬೆಳಗ್ಗೆ ರಾಜ್ಯಪಾಲರಿಗೆ ಈ ರೀತಿ ಕರೆ ನೀಡುತ್ತಿದ್ದಂತೆ ಹ್ಯೂಸ್ಟನ್​ ಪೊಲೀಸ್​ ಮುಖ್ಯಸ್ಥ ​ ಆರ್ಟ್ ಅಸೆವೆಡೊ ಅವರು ಟ್ರಂಪ್​ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡಿರಿ ಎಂದು ಖಾರವಾಗಿಯೇ, ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ‘ಲಾಕ್​ಡೌನ್​ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್​ ಪ್ರಧಾನಿ

    ಮಾಧ್ಯಮವೊಂದರೊಂದಿಗೆ ಮಾತನಾಡಿದ ಪೊಲೀಸ್ ಚೀಫ್​, ಇಡೀ ದೇಶದ ಪೊಲೀಸರ ಪರವಾಗಿ ನಾನು ಟ್ರಂಪ್​ ಬಳಿ ಕೇಳಿಕೊಳ್ಳುತ್ತಿದ್ದೇನೆ. ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ. ಪರಿಸ್ಥಿತಿ ಸರಿಯಾಗುವವರೆಗೂ ಮಾತನಾಡಬೇಡಿ ಎಂದು ಹೇಳಿದ್ದಾರೆ.

    ಇದು ಸೂಕ್ಷ್ಮ ವಿಚಾರ. ಇಲ್ಲಿ ಪ್ರತಿಭಟನಾಕಾರರನ್ನು ದ್ವೇಷದಿಂದ, ಕೋಪದಿಂದ ಗೆಲ್ಲಲು ಸಾಧ್ಯವಿಲ್ಲ. ಹತ್ತಿಕ್ಕಲು ಆಗುವುದಿಲ್ಲ. ಅವರ ಮನವೊಲಿಸಬೇಕು. ಹೃದಯವನ್ನು ಗೆಲ್ಲಬೇಕು ಎಂದು ಪೊಲೀಸ್​ ಮುಖ್ಯಸ್ಥ ಹೇಳಿದ್ದಾರೆ.
    ಪ್ರತಿಭಟನೆ ಉಗ್ರ ಸ್ವರೂಪ ತಾಳುತ್ತಲೇ ಇದೆ. ಇಲ್ಲಿ ಅನೇಕರು ಯುವಕರು ಇದ್ದಾರೆ. ಅವರ ಜೀವವನ್ನೆಲ್ಲ ಅಪಾಯಕ್ಕೆ ದೂಡಬೇಡಿ ಎಂದು ಟ್ರಂಪ್​ ಬಳಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್​ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts