More

    ಸದ್ಯದಲ್ಲಿಯೇ 400 ಹುದ್ದೆ ಭರ್ತಿಗೆ ಕೆಇಎ ಅಧಿಸೂಚನೆ

    ಬೆಂಗಳೂರು ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸದ್ಯದಲ್ಲಿಯೇ ಸಿಹಿ ಸುದ್ದಿ ನೀಡಲಿದೆ.

    ಸಾರಿಗೆ ಇಲಾಖೆ, ಪಶು ವೈದ್ಯಕೀಯ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್), ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿರುವ ಸುಮಾರು 400ಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗೆ ಡಿಸೆಂಬರ್ ಮೊದಲ ವಾರದಲ್ಲಿ ಅಧಿಸೂಚನೆ ಪ್ರಕಟಿಸಲಿದೆ.

    ಕೆಇಎ ನಲ್ಲಿ ಡಿಪ್ಲೊಮೊ ಸಿಇಟಿ, ಪಿಜಿಇಟಿ, ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಎಲ್ಲ ಪ್ರಕ್ರಿಯೆಗಳು ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ನೇಮಕಾತಿಗೆ ಸಂಬಂಧಿಸಿದ ಹೊಸ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

    455 ಪಿಎಸ್‌ಐ ಹುದ್ದೆ ನೇಮಕಾತಿ ಕೂಡ ಸದ್ಯದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ. ಅದರ ಜತೆಜತೆಗೆ ವಿವಿಧ ಇಲಾಖೆಗಳಲ್ಲಿರುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ವಿವಿಧ ವಿಭಾಗಗಳ ಇಂಜಿನಿಯರ್ಸ್, ಆಪ್ತ ಸಹಾಯಕ ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

    ಕೆಪಿಎಸ್ಸಿ ಕೂಡ ವಿವಿಧ ಇಲಾಖೆಗಳಲ್ಲಿರುವ 2 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ಮುಂದಿನ ವರ್ಷ ಅಧಿಸೂಚನೆ ಪ್ರಕಟಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಕೆಇಎ ಕೂಡ ಅಧಿಸೂಚನೆ ಪ್ರಕಟಿಸುತ್ತಿರುವುದು ಹುದ್ದೆ ಆಕಾಂಕ್ಷಿಗಳಿಗೆ ಖುಷಿಯ ವಿಚಾರವಾಗಿದೆ.

    ಕಳೆದ ಎರಡು ವರ್ಷಗಳಲ್ಲಿ ಕೆಇಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸಹಾಯಕ ಪ್ರಾಧ್ಯಾಪಕ, ಬಿಎಂಆರ್‌ಸಿಎಲ್, ವಿಧಾನಸಭೆ ಸಚಿವಾಲಯ, ವಿವಿಧ ನಿಗಮ ಮಂಡಳಿಗಳ ಖಾಲಿ ಹುದ್ದೆಗಳಿಗೆ ಪರೀಕ್ಷೆ ನಡೆಸಿದೆ. ಈ ಪೈಕಿ ಕೆಲವು ನೇಮಕಾತಿಗಳು ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಪೂರ್ಣಗೊಳ್ಳುವ ಕೊನೇ ಹಂತದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts