More

    ತೆಲಂಗಾಣದಲ್ಲಿ 2000 ಎಕರೆಯಲ್ಲಿ ಮತ್ತೊಂದು ಫಿಲಂ ಸಿಟಿ; ಸ್ಟಾರ್ ನಟರ ಜತೆ ಸಿಎಂ ಕೆಸಿಆರ್ ಮಾತುಕತೆ

    ಹೈದರಾಬಾದ್​: ದಕ್ಷಿಣ ಭಾರತದಲ್ಲಿ ಟಾಪ್​ ಫಿಲಂ ಸಿಟಿ ಎಂದೇ ಹೆಸರುಗಳಿಸಿರುವ ರಾಮೋಜಿ ಫಿಲಂ ಸಿಟಿಯ ಜತೆಗೆ ಮತ್ತೊಂದು ಚಿತ್ರನಗರಿಯನ್ನು ಸೃಷ್ಟಿ ಮಾಡಲು ತೆಲಂಗಾಣ ಸರ್ಕಾರ ಮನಸು ಮಾಡಿದೆ. ಭಾರತೀಯ ಸಿನಿಮಾರಂಗದ ಬೇರೆ ಬೇರೆ ಪ್ರಾದೇಶಿಕ ಭಾಷೆಯ ಸಿನಿಮಾ ತಂಡಗಳು ಹೈದರಾಬಾದ್​ಗೆ ಆಗಮಿಸಿ ರಾಮೋಜಿ ಚಿತ್ರನಗರಿಯಲ್ಲಿ ಸಿನಿಮಾ ಶೂಟಿಂಗ್​ ಮಾಡಿಕೊಳ್ಳುತ್ತವೆ. ಅದೇ ರೀತಿ ಮತ್ತೊಂದು ಫಿಲಂ ಸಿಟಿ ನಿರ್ಮಾಣ ಮಾಡಲು ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್​ ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಈ ಸಲದ ದೀಪಾವಳಿ ಆಚರಣೆ ಕೈಬಿಟ್ಟ ಬಚ್ಚನ್​ ಕುಟುಂಬ; ಇದರ ಹಿಂದಿದೆ ಒಂದು ನೋವಿನ ಕಥೆ

    ಇತ್ತೀಚೆಗಷ್ಟೇ ಸಿಎಂ ಕೆಸಿಆರ್​, ಹಿರಿಯ ನಟರಾದ ಚಿರಂಜೀವಿ ಮತ್ತು ನಾಗಾರ್ಜುನ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮತ್ತೊಂದು ಚಿತ್ರನಗರಿಯನ್ನು ನಿರ್ಮಾಣ ಮಾಡುವ ಬಗ್ಗೆ ಸುದೀರ್ಘವಾದ ಮಾತುಕತೆ ನಡೆದಿದೆ. 1500 ಎಕರೆಯಿಂದ 2000 ಎಕರೆ ಪ್ರದೇಶದಲ್ಲಿ ಚಿತ್ರನಗರಿ ತಲೆ ಎತ್ತಲಿದೆಯಂತೆ. ಅಷ್ಟೇ ಅಲ್ಲ ಪ್ರಮುಖ ಚಲನಚಿತ್ರ ವ್ಯಕ್ತಿಗಳು ಮತ್ತು ಅಧಿಕಾರಿಗಳ ನಿಯೋಗವು ಬಲ್ಗೇರಿಯಾದ ಫಿಲಂ ಸಿಟಿಗೆ ಭೇಟಿ ನೀಡಿ, ಹೈದರಾಬಾದ್‌ನ ಫಿಲ್ಮ್ ಸಿಟಿಗೆ ಪ್ರಸ್ತಾಪಗಳು ಮತ್ತು ಯೋಜನೆಗಳನ್ನು ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ.

    ‘ರಾಜ್ಯದಲ್ಲಿ ಚಲನಚಿತ್ರೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ವಿಸ್ತರಿಸಲು ಸಾಕಷ್ಟು ಅವಕಾಶಗಳಿವೆ. ಹೈದರಾಬಾದ್ ಕಾಸ್ಮೋಪಾಲಿಟನ್ ನಗರ. ದೇಶದ ವಿವಿಧ ಭಾಗಗಳ ಜನರು ಮತ್ತು ವಿವಿಧ ಮಾತೃಭಾಷೆಗಳು ಇಲ್ಲಿ ನೆಲೆಸಿವೆ. ನಗರವು ಯಾರಿಗಾದರೂ ಆಶ್ರಯ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸಿನಿಮಾ ಚಿತ್ರೀಕರಣ ಮತ್ತು ಇತರ ಎಲ್ಲಾ ಚಿತ್ರ ನಿರ್ಮಾಣ ಚಟುವಟಿಕೆಗಳು ಆರಾಮವಾಗಿ ನಡೆಯಲು ಇಲ್ಲಿ ಅದ್ಭುತ ಸೌಲಭ್ಯಗಳನ್ನು ರಚಿಸಬಹುದು’ ಎಂದಿದ್ದಾರೆ.

    ಇದನ್ನೂ ಓದಿ: ಬರ್ತ್​ಡೇ ದಿನವೇ ಬದ್ಧ ವೈರಿಗಳ ಜತೆ ಮಾಂಸದೂಟ ಸವಿದ ಕಮಲ್​ ಹಾಸನ್​!!

    ಪ್ರಸ್ತಾವಿತ ಚಲನಚಿತ್ರ ನಗರದಲ್ಲಿ, ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸ್ಟುಡಿಯೋಗಳನ್ನು ಸ್ಥಾಪಿಸಲು ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಚಲನಚಿತ್ರ ನಿರ್ಮಾಣ ಕಂಪನಿಗಳಿಗೆ ಪ್ಲಾಟ್‌ಗಳನ್ನು ಹಂಚಲಾಗುತ್ತದೆ. ಉದ್ದೇಶಿತ ಚಲನಚಿತ್ರ ನಗರದಲ್ಲಿ ಏರ್‌ಸ್ಟ್ರಿಪ್‌ಗಾಗಿ ಅವಕಾಶ ಕಲ್ಪಿಸಲಾಗುವುದು. ಇತರ ಎಲ್ಲ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. (ಏಜೆನ್ಸೀಸ್​)

    ದೀಪಾವಳಿ ಆಫರ್; 400 ಸಿನಿಮಾ ಕಾರ್ಮಿಕರಿಗೆ ಚಿನ್ನದ ನಾಣ್ಯ ನೀಡಿದ ತಮಿಳು ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts