More

    ದುಂದು ವೆಚ್ಚಕ್ಕೆ ಕಡಿವಾಣ ಶ್ಲಾಘನೀಯ

    ಕವಿತಾಳ: ಸಮೀಪದ ವಂದಲಿ ಹೊಸೂರು ಗ್ರಾಮದಲ್ಲಿ ಉಟಕನೂರು ಬವಲಿಂಗತಾತನವರ ಜಾತ್ರೆ ಅಂಗವಾಗಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

    ವಧು-ವರರಿಗೆ ಮಾಂಗಲ್ಯ ವಿತರಿಸಿ ಮಾತನಾಡಿದ ಮಸ್ಕಿ ಗಚ್ಚಿನಮಠದ ವರ ರುದ್ರಮುನಿಸ್ವಾಮೀಜಿ, ದೇವಸ್ಥಾನ ಹಾಗೂ ಜಾತ್ರೆ ಕಾರ್ಯಕ್ರಮದಲ್ಲಿ ಬಡವರ ಅನುಕೂಲಕ್ಕಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಕೆಲಸ ಶ್ಲಾಘನೀಯವಾಗಿದೆ ಎಂದರು.

    ಮಠದ ಪಿಠಾಧಿಪತಿ ಅಮರಯ್ಯ ತಾತ ಮಾತನಾಡಿ, ಜಾತ್ರೆಯ ಸಮಯದಲ್ಲಿ ಬಡವರಿಗೆ ಅನುಕೂಲವಾಗಲಿ ಎಂದು ಭಕ್ತರು ಸಾಮೂಹಿಕ ವಿವಾಹ ನಡೆಸಲು ಸಹಾಯ ಮಾಡಿದ್ದಾರೆ. ವಧು-ವರರು ಸಾಲ ಮಾಡಿಕೊಳ್ಳದೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದರು. ಮುದುಕಪ್ಪ ತಾತ ಉಟಕನೂರು, ಬಸವರಾಜಪ್ಪಗೌಡ ಹರ‌್ವಾಪುರ, ವಜ್ಜಲ ಬೀರಪ್ಪ, ಸಂಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts