More

    ಕವಲೂರಲ್ಲಿ ಶ್ರೀ ದುರ್ಗಾದೇವಿ ಜಾತ್ರೆ, ಮೈನಳ್ಳಿ-ಬಿಕನಳ್ಳಿ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ

    ಅಳವಂಡಿ: ದೇವರ ಮೇಲೆ ನಂಬಿಕೆಯೊಂದಿಗೆ ಪ್ರಯತ್ನವೂ ಇದ್ದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೈನಳ್ಳಿ-ಬಿಕನಳ್ಳಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಕವಲೂರಿನಲ್ಲಿ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ಅಂಗವಾಗಿ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹ ಬಡವರಿಗೆ ಆರ್ಥಿಕ ಹೊರೆ ತಪ್ಪಿಸಲಿದೆ. ಜೀವನದಲ್ಲಿ ಗಳಿಸಿದ ಹಣವನ್ನು ದಾನ ಮಾಡುವುದರಿಂದ ಮನಃಶಾಂತಿ ಸಿಗಲಿದೆ ಎಂದರು.

    ಇದನ್ನೂ ಓದಿ: ಸರಳ-ಸಾಮೂಹಿಕ ವಿವಾಹಕ್ಕೆ ಇರಲಿ ಆದ್ಯತೆ: ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ

    ಇದಕ್ಕೂ ಮುನ್ನ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೂಗಳಿಂದ ಅಲಂಕರಿಸಲಾಗಿತ್ತು. ಭಕ್ತರು ದೇವಿಗೆ ಕಾಯಿ, ಕರ್ಪೂರ, ನೈವೇದ್ಯ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.

    ಭರ್ಜರಿ ಊಟದ ವ್ಯವಸ್ಥೆ: ಜಾತ್ರೆ ನಿಮಿತ್ತ ಭಕ್ತರಿಗಾಗಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು, ರೊಟ್ಟಿ, ಚಪಾತಿ, ಬೂಂದಿ, ಜಿಲೇಬಿ, ಅನ್ನ ಸಾಂಬಾರ, ಚಟ್ನಿ ಮಾಡಲಾಗಿತ್ತು. ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಮಮತಾ ನೇತೃತ್ವದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ದಾಸೋಹ ಸೇವೆ ಸಲ್ಲಿಸಿದರು.

    ಪ್ರಮುಖರಾದ ಮಹಾಂತೇಶ ಸಿಂದೋಗಿಮಠ, ತಿಮ್ಮಣ್ಣ ಸಿದ್ನೆಕೊಪ್ಪ, ಹನುಮಂತ ಹೊಸಮನಿ, ಹೊನಕೇರಪ್ಪ, ಶರಣಪ್ಪ, ಅಪ್ಪಣ್ಣ, ಯಂಕಪ್ಪ, ರವಿ ಉಪ್ಪಾರ, ದೇವಪ್ಪ, ಲಕ್ಷ್ಮಣ, ಶೇಖರಯ್ಯ, ವಿಜಯಕುಮಾರ, ಮುತ್ತಣ್ಣ, ಮುತ್ತಯ್ಯ, ನಾಗರಾಜ, ಶರಣಪ್ಪ, ಯಂಕಣ್ಣ, ಕರಿಯಪ್ಪ, ಗವಿಸಿದ್ದಯ್ಯ, ರವಿ, ನಾಗರಾಜ, ಗವಿಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts