More

    ಕರಾವಳಿಗರಲ್ಲಿ ವಿಶೇಷ ಧಾರ್ಮಿಕ ನಂಬಿಕೆ: ಡಾ.ವಿಜಯ ಸಂಕೇಶ್ವರ

    ಕಟೀಲು: ದ.ಕ ಜಿಲ್ಲೆಯ ಜನರು ವಿಶೇಷ ಧಾರ್ಮಿಕ ನಂಬಿಕೆ ಹೊಂದಿದವರಾಗಿದ್ದಾರೆ. ಕಟೀಲು ದೇವಸ್ಥಾನದಲ್ಲಿ ನಿರಂತರ ಉತ್ತಮ ಕಾರ್ಯ ಗಳು ನಡೆಯುತ್ತಿವೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
    ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಈ ಹಿಂದೆಯೂ ದೇವಳಕ್ಕೆ ಬಂದಿದ್ದೇನೆ. ಜನರ ಭಕ್ತಿ ಅಪಾರವಾದುದು, ಇದು ನಿರಂತರ ನಡೆಯುತ್ತಿರಲಿ ಎಂದರು.
    ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಮಾತನಾಡಿ, ನದಿಗಳ ಸಂಗಮದಲ್ಲಿ ಪ್ರಾಕೃತಿಕ ಮಡಿಲಿನಲ್ಲಿ ದೇವಸ್ಥಾನ, ಮಠ ಮಂದಿರಗಳನ್ನು ನಮ್ಮ ಪೂರ್ವಿಕರು ನಿರ್ಮಿಸಿದ್ದಾರೆ. ಅಪನಂಬಿಕೆಯ ಸ್ಪರ್ಷವಾಗದ ಅದ್ಭುತ ಜಾಗ ದೇವಾಲಯ. ನಾವು ಮಾತನಾಡಿಸದೆ ಗುಡಿಯ ಒಳಗೆ ಇರುವ ದೇವರು ಮಾತನಾಡುವುದಿಲ್ಲ. ದೇವರು ನಮ್ಮೊಳಗೆ ಇದ್ದಾನೆ ಎಂಬ ಎಚ್ಚರ ಇರಬೇಕು ಎಂದರು.

    ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಕಾಟಿಪಳ್ಳ ಶ್ರೀ ಮಹಾಗಣಪತಿ ಮಂದಿರ ಆನುವಂಶಿಕ ಮೊಕ್ತೇಸರ ಶಿವಪ್ರಸಾದ್ ತಂತ್ರಿ ದೇರೆಬೈಲು, ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಅರ್ಚಕ, ಆಡಳಿತ ಮೊಕ್ತೇಸರ ಈಶ್ವರ ಭಟ್, ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆ.ವ್ನಿೇಶ್ ಭಟ್, ಕಟೀಲು ದೇವಳ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಉದ್ಯಮಿ ಪಂಜ ಶಾಂತಾರಾಮ ಶೆಟ್ಟಿ, ಸುಂಕದಕಟ್ಟೆ ನವದುರ್ಗಾ ಕ್ಯಾಶ್ಯೂ ಸಂಸ್ಥೆಯ ಕಮಲಾಕ್ಷ ಕಾಮತ್, ಪೆರ್ಮುದೆ ಶ್ರೀ ಸೋಮನಾಥೇಶ್ವರ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಚಂದ್ರಹಾಸ ಶೆಟ್ಟಿ ಬಂಟ್ವಾಳ, ಸೌಂದರ್ಯ ಸಂಸ್ಥೆಯ ಎಸ್.ಸೌಂದರ್ಯ ರಮೇಶ್, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಅಮ್ಮುಂಜೆಗುತ್ತು ಮಂಜಯ್ಯ ಶೆಟ್ಟಿ, ಅದ್ಯಪಾಡಿ ಶ್ರೀ ನೀಲಕಂಠ ದೇವಸ್ಥಾನದ ಆಡಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಪಾರೆಳೆಗುತ್ತು ಭುಜಂಗ ಶೆಟ್ಟಿ, ಸಮಿತಿ ಅಧ್ಯಕ್ಷ ನರೇಶ್ ಶೆಣೈ ಮಂಗಳೂರು, ಜಯಶ್ರೀ ಅಮರನಾಥ ಶೆಟ್ಟಿ, ವರಪ್ರಸಾದ್ ಶೆಟ್ಟಿ ಬಜ್ಪೆ, ಲಲಿತಾ ಸಂಕೇಶ್ವರ ಉಪಸ್ಥಿತರಿದ್ದರು.
    ಪ್ರೊ.ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಪಕ್ಕಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts