More

    ಜಾತಿ ಉಪಜಾತಿ ಗಳನ್ನು ಬದಿಗಿಟ್ಟು ನಾವೆಲ್ಲರೂ ಸನಾತನೀಯರು ಎಂಬ ಭಾವನೆ ನಮ್ಮಲ್ಲಿ ಬರಬೇಕು-ಡಾ.ವಿಜಯ ಸಂಕೇಶ್ವರ ಅಭಿಪ್ರಾಯ

    ಶಿರಸಿ: ಜ್ಞಾನಾರ್ಜನೆ ಆಗಬೇಕಾದರೆ ಸನಾತನ ಧರ್ಮದ ಪುಸ್ತಕ ಗಳನ್ನು ಓದಬೇಕು. ಜಾತಿ ಉಪಜಾತಿ ಗಳನ್ನು ಬದಿಗಿಟ್ಟು ನಾವೆಲ್ಲರೂ ಸನಾತನೀಯರು ಎಂಬ ಭಾವನೆ ನಮ್ಮಲ್ಲಿ ಬರಬೇಕು ಎಂದು ವಿಆರ್ ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
    ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ವರ್ಣವಲ್ಲೀ ಪ್ರಭಾ ಮಾಸಪತ್ರಿಕೆಯ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಮೊಬೈಲ್ ಗಳ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗಿದೆ.ಪುಸ್ತಕಗಳನ್ನು ಓದಿದಾಗ ಮಾತ್ರ ನಮಗೆ ಭಾಷೆಯ ಪರಿಚಯ ಆಗುತ್ತದೆ.
    ಜಗತ್ತಿನಲ್ಲಿ ಎಲ್ಲದಕ್ಕಿಂತ ಕಡಿಮೆ ದರದಲ್ಲಿ ಕನ್ನಡ ದಿನಪತ್ರಿಕೆ ಸಿಗುತ್ತಿದೆ. 18-20ರೂ ದಿನ ಪತ್ರಿಕೆ ಉತ್ಪಾದನೆ ವೆಚ್ಚ ಬರುತ್ತಿದೆ. ನಾವು 5ರೂ.ಗೆ ಕೊಡುತ್ತೇವೆ. ಜಾಹೀರಾತಿನಿಂದ ಮಾತ್ರ ಪತ್ರಿಕೆ ನಡೆಯುತ್ತಿವೆ. ಸಾವಿರಾರು ರೂ. ಪಾರ್ಟಿಗೆ ಖರ್ಚು ಮಾಡುವವರು ಒಂದು ಪತ್ರಿಕೆಗೆ5 ರೂ. ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಓದುವ ಹವ್ಯಾಸ ಇರುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಆತಂಕ ತರುತ್ತಿದೆ ಎಂದರು.
    ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಮನುಷ್ಯ ಅಭಿವೃದ್ದಿ ಹೆಸರಿನಲ್ಲಿ ಏನೆಲ್ಲ ಮಾಡಿರಬಹುದು. ಆದರೆ, ಪ್ರಕೃತಿಯ ಕೊಡುಗೆಯಲ್ಲಿ ಶೇ.1ರಷ್ಟೂ ಮನುಷ್ಯ ಮಾಡಲು ಆಗಲಿಲ್ಲ. ಪುರಾಣ ಇಂದು ಇತಿಹಾಸ ಆಗಿದ್ದರ ಬಗ್ಗೆ ದಾಖಲೆಗಳು ಸಿಕ್ಕಿ ವೆ. ಆದರೆ ಕಳೆದ 50ವರ್ಷದಲ್ಲಿ ಪರಿಸರ ನಾಶವನ್ನು ಮಾಡುತ್ತ ಅಭಿವೃದ್ದಿಯತ್ತ ಸಾಗಿದ್ದೇವೆ. ನಮ್ಮ ಶಿಕ್ಷಣ ಬೇಡ ಬೇಡ ಎಂದು ಹೇಳುವದಕ್ಕಿಂತ ಬೇಕು ಬೇಕು ಎಂದು ಹೇಳುವಂತೆ ಮಾಡುತ್ತಿದೆ ಎಂದರು.

    ಇದನ್ನೂ ಓದಿ: ಬರುವ ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ
    ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದ ಕುಲಪತಿ ಡಾ.ನಿರಂಜನ ವಾನಳ್ಳಿ ಮಾತನಾಡಿ, ಲಾಭದ ಉದ್ದೇಶ ಇಲ್ಲದೇ ಪತ್ರಿಕೆ ನಡೆಯುವದು ದೊಡ್ಡ ಸಂಗತಿ. ಕನ್ನಡಕ್ಕೆ ಕೂಡ ಅನುಪಮ ಕೊಡುಗೆಯಾಗಿದೆ. ಕನ್ನಡ ಪತ್ರಿಕೆಗಳು ಆಂಗ್ಲ ಭಾಷೆಯ ಶೀರ್ಷಿಕೆ ಬಳಸುವದು ಕನ್ನಡದ ಶಬ್ಧ ಇದ್ದರೂ ಜಾಗತೀಕರಣದ ಪ್ರಭಾವ ಇರಬಹುದು ಎಂದರು.
    ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ನೈತಿಕತೆ, ಪ್ರಾಮಾಣಿಕತೆ, ಧರ್ಮದಲ್ಲಿ ನಿಷ್ಠೆ ಕಡಿಮೆ ಆಗುತ್ತಿರುವ ನಡುವೆ, ಇಂತಹ ವಿಚಾರದಲ್ಲಿ ಶ್ರೀಮಠ ಅತ್ಯಂತ ಎತ್ತರದಲ್ಲಿದೆ ಎಂದ ಅವರು ಬೆಂಗಳೂರು ಅನಂತಕುಮಾರ ಅವರು ಇದ್ದಿದ್ದರೆ ಜಿಲ್ಲೆಯ ಅನೇಕ ತಲ್ಲಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುತ್ತಿದ್ದರು ಎಂದರು.

    ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವ ಪತ್ರಿಕೆ
    ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಆಶಿರ್ವಚನ ನೀಡಿ, ಸಮಾಜದಲ್ಲಿರುವ ತನ್ನ ತನದ ಮರೆವನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ವಾಗಿದೆ. 25ವರ್ಷಗಳ ಹಿಂದೆ ಸ್ವರ್ಣವಲ್ಲೀ ಪ್ರಭಾ, ಶ್ರೀಭಗವತ್ಪಾದ ಪ್ರಕಾಶನ ಆರಂಭವಾಗಿದೆ. ಆತ್ಮ ವಿಸ್ಮೃತಿ ಬಗ್ಗೆ ಸಮಾಜ ಹೋಗುತ್ತಿರುವ ವೇಳೆ ಈ ಬಗ್ಗೆ ಜಾಗೃತಿ ಮೂಡಿಸುವದೇ ಮುಖ್ಯ ಆಶಯವಾಗಿದೆ. ಸಮಾಜವನ್ನು ಆತ್ಮ ಜಾಗೃತಿಯತ್ತ ತರುವದೇ ಪ್ರಕಾಶನದ ಆಶಯವಾಗಿದೆ. ಕೆಲವು ಸಲ ಗೊತ್ತಿಲ್ಲದೇ, ಕೆಲವು ಗೊತ್ತಿದ್ದೂ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ನಾವು ಇನ್ನೇನೋ ಆಕರ್ಷಷೆಯಿಂದ ನೋಡುತ್ತಿದ್ದೇವೆ. ನಮ್ಮ ತನ ಮರೆಯುತ್ತಿದ್ದೇವೆ ಎಂದೂ ಹೇಳಿದರು.
    ಇಂದು ವಿದೇಶ ಸಂಸ್ಕೃತಿ, ಭಾಷೆ, ವೇಷ, ಆಹಾರ ಸೇರಿದಂತೆ ಅನೇಕ ಸಂಗತಿ ನೋಡುತ್ತಿದ್ದೇವೆ. ನಮ್ಮ ತನ ಮರೆತು ಅತ್ತ ವಾಲುತ್ತಿದ್ದೇವೆ. ಒಳ್ಳೆಯ ಸಂಗತಿ ಇದ್ದರೆ ವಿದೇಶದ್ದು ಕೂಡ ಪಡೆಯಬಹುದು. ಆದರೆ, ನಮ್ಮದು ಚೆನ್ನಾಗಿದ್ದರೂ ಇನ್ನೊಂದರೆಡೆ ಮರೆತು ಆಕರ್ಷಿತರಾಗುತ್ತಿರುವದು ಸರಿಯಲ್ಲ ಎಂದ ಶ್ರೀಗಳು, ನಮ್ಮದು ಮರೆತು ಹೋಗುತ್ತಿರುವದು ಸರಿಯಲ್ಲ. ತನ್ನ ಬಗ್ಗೆ ವಿಸ್ಮೃತಿ ಕೂಡ ಮರೆಯಬಾರದು ಎಂದರು.
    ಈ ಸಂದರ್ಭದಲ್ಲಿ ಸಂದೇಶ ಮಾಲಿಕ ಕೃತಿಯನ್ನು ತೇಜಸ್ವಿನಿ ಅನಂತಕುಮಾರ ಹಾಗೂ ರಜತಪ್ರಭಾ ಕೃತಿಯನ್ನು ಡಾ.ನಿರಂಜನ ವಾನಳ್ಳಿ ಬಿಡುಗಡೆ ಗೊಳಿಸಿದರು. ಅಧ್ಯಾತ್ಮ ಪ್ರಕಾಶದ ಉಪ ಸಂಪಾದಕ ಲಕ್ಷ್ಮೀಶ ಭಟ್,ಟಿ.ಎಂ ಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ,ಟಿಎಸ್ಎಸ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ,ಶ್ರೀ ಮಠದ ಅಧ್ಯಕ್ಷ ವಿ.ಎನ್ .ಹೆಗಡೆ ಬೊಮ್ಮನಳ್ಳಿ,ಕೆ.ವಿ ಭಟ್ ಇದ್ದರು.


    ಉದ್ಯಮ ಕ್ಷೇತ್ರದಲ್ಲಿ ವಿದ್ಯುತ್ ಸಂಚಲನ ಮೂಡಿಸಿದವರು ವಿಜಯ ಸಂಕೇಶ್ವರ ಅವರು. ಯುವಕರಿಗೆ ಇವರ ಸಾಧನೆ ಆದರ್ಶ ವಾಗಿದೆ.
    ತೇಜಸ್ವಿನಿ ಅನಂತಕುಮಾರ.

    ಅಧ್ಯಕ್ಷೆ ಅಧಮ್ಯ ಚೇತನ ಸಂಸ್ಥೆ ಬೆಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts