More

    ಪಾಕಿಸ್ತಾನದಲ್ಲಿ ಸಿಲುಕಿರುವ ಕಾಶ್ಮೀರಿಗಳು ಶೀಘ್ರ ತವರಿಗೆ

    ನವದೆಹಲಿ: ಲಾಕ್​​ಡೌನ್​​ನಿಂದಾಗಿ ಪಾಕಿಸ್ತಾನದಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರ ನಿವಾಸಿಗಳು ಜೂನ್ 25 ರಿಂದ ಪಂಜಾಬ್​​ನ ಅಟ್ಟಾರಿ- ವಾಘಾ ಗಡಿಯ ಮೂಲಕ ರಸ್ತೆ ಮಾರ್ಗವಾಗಿ ಹಿಂದಿರುಗಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
    ಅವರ ವಾಪಸಾತಿಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಅಮೃತಸರ ಸ್ಥಳೀಯ ಆಡಳಿತ ವಿಭಾಗಕ್ಕೆ ಸಹಾಯ ಮಾಡಲು ಅಟ್ಟಾರಿಗೆ ಜಮ್ಮು ಕಾಶ್ಮೀರ ಸರ್ಕಾರ ಹಿರಿಯ ಅಧಿಕಾರಿಗಳನ್ನು ಕಳುಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ವಲಸೆ ಕಾರ್ಮಿಕರ ಮುಖದಲ್ಲಿ ನಗು ಮೂಡಿಸಿದ ಕೇಂದ್ರ; ಮಹತ್ವದ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಸಿಲುಕಿದ್ದ ಕಾಶ್ಮೀರಿಗಳ ವಾಪಸಾತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣಿಯಮ್ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದ ನಂತರ ಹಲವರನ್ನು ಮನೆಗೆ ಕರೆದೊಯ್ಯಲಾಗಿದ್ದು, ಇನ್ನುಳಿದವರನ್ನು ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ, ವಿಶೇಷ ರೈಲುಗಳು ಮತ್ತು ಬಸ್​​ಗಳಲ್ಲಿ ಕಾಶ್ಮೀರಿಗಳು ಮರಳಲು ಅನುಕೂಲವಾಗುವಂತೆ ವಿವಿಧ ರಾಜ್ಯಗಳಿಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು.

    https://www.vijayavani.net/covid-19-drug-patanjali-to-launch-ayurvedic-medicine-coronil-to-treat-coronavirus-infection-today

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts