More

    ಕಸಾಪ ಜನಸಾಮಾನ್ಯರ ಪರಿಷತ್ ಆಗಲಿ

    ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶಯ

    ಸಾಹಿತ್ಯದ ಆಸಕ್ತಿ ಹೆಚ್ಚಿಸುವಂತೆ ಕೆಲಸ ಮಾಡಿ


    ವಿಜಯವಾಣಿಸುದ್ದಿಜಾಲ ನೆಲಮಂಗಲ
    ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷ ಸ್ಥಾನವೆಂದರೆ ಉತ್ತಮ ಜವಾಬ್ದಾರಿ ಎಂದು ಭಾವಿಸಿ ಕಾರ್ಯ ನಿರ್ವಹಿಸಬೇಕು ಎಂದು ಪವಾಡ ಶ್ರೀಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು.
    ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಕವಿಗೋಷ್ಠಿಯಲ್ಲಿ ಮಾತನಾಡಿದರು.
    ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕಿದೆ. ಮನೆ ಮನೆಗೆ ಸಾಹಿತ್ಯವನ್ನು ತಲುಪಿಸುವ ಕಾರ್ಯದ ಜತೆಗೆ ಸಾಹಿತ್ಯ ಪರಿಷತ್ ಬಗ್ಗೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದರು. ಸಾಹಿತಿ ಮಣ್ಣೆಮೋಹನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಾಂತರ ಜಿಲ್ಲಾ ಗೌರವ ಕಾರ್ಯದರ್ಸಿ ರವಿಕಿರಣ್, ಮಹಿಳಾ ಪ್ರತಿನಿಧಿ ಮಂಜುಳಾ ಸಿದ್ದರಾಜು, ಪುರಸಭೆ ಮಾಜಿ ಸದಸ್ಯ ಎಚ್.ಜಿ.ರಾಜು, ಸಿದ್ದಗಂಗ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಮರೇಂದ್ರ, ಪ್ರಾಧ್ಯಾಪಕ ಡಾ.ಜಿ.ಗಂಗರಾಜು, ಕೋಮಲಾ, ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್, ಡಿ.ಸಿದ್ದರಾಜು, ಕೇಶವ್, ಕಲಾವಿದ ಚಿಕ್ಕಮಾರನಹಳ್ಳಿದಿನೇಶ್, ಸಿ.ಹೆಚ್.ಸಿದ್ದಯ್ಯ, ಸಾಹಿತಿ ಡಾ.ಚೌಡಯ್ಯ, ಶಿವಲಿಂಗಯ್ಯ, ಅನಂದ್.ವೈ.ಮೌರ್ಯ, ನಾಗರಾಜು, ಲಕ್ಷ್ಮೀಶ್ರೀನಿವಾಸ್, ವೆಂಕಟೇಶ್.ಆರ್.ಚೌಥಾಯಿ ಇದ್ದರು.

    ಅಧಿಕಾರ ಹಸ್ತಾಂತರ ಕನ್ನಡಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಪ್ರದೀಪ್‌ಕುಮಾರ್ ನೂತನ ಅಧ್ಯಕ್ಷ ಬಿ.ಪ್ರಕಾಶ್‌ಮೂರ್ತಿ ಅವರಿಗೆ ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

    ನೂತನ ಪದಾಧಿಕಾರಿಗಳ ನೇಮಕ ಕನ್ನಡಸಾಹಿತ್ಯ ಪರಿಷತ್ ತಾಲೂಕು ಗೌರವ ಕಾರ್ಯದರ್ಶಿಗಳಾಗಿ ಭಾನುಪ್ರಕಾಶ್, ಸದಾನಂದ ಆರಾಧ್ಯ, ಸೋಂಪುರ ಹೋಬಳಿ ಅಧ್ಯಕ್ಷರಾಗಿ ನರಸಿಂಹರಾಜು, ಕಸಬಾ ಹೋಬಳಿ ಅಧ್ಯಕ್ಷ ಬಿ.ನಂಜೇಗೌಡ, ನಗರದ ಅಧ್ಯಕ್ಷರಾಗಿ ಮಲ್ಲೇಶ್, ತ್ಯಾಮಗೊಂಡ್ಲು ಹೋಬಳಿ ಅಧ್ಯಕ್ಷರಾಗಿ ವಿಜಯವಾಣಿ ತ್ಯಾಮಗೊಂಡ್ಲು ವರದಿಗಾರ ಟಿ.ಎಸ್.ಲಕ್ಷ್ಮೀಕಾಂತ್ ಅವರನ್ನು ನೇಮಕ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts