More

    ಕಸಾಪದಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ಮನುಷ್ಯನ ಆಸೆಗಳು ಅಪರಿಮಿತವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಸಂತೆಯಲ್ಲೂ ಒಂಟಿತನ ಕಾಡುವ ಈ ದಿನಗಳಲ್ಲಿ ಬದುಕುತ್ತಿರುವಾಗ ಪರಸ್ಪರ ಮಾತುಕತೆ, ಚರ್ಚೆ, ಹಾಸ್ಯದ ಮೂಲಕ ಮನಸ್ಸನ್ನು ಹಗುರವಾಗಿಸಬಹದು ಎಂದು ನಗೆ ಭಾಷಣಕಾರ ಅರುಣ ಕುಲಕಣಿರ್ ಹೇಳಿದರು.
    ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಯುಗಾದಿ ಹಬ್ಬದ ನಿಮಿತ್ಯ ನಡೆದ ಹಾಸ್ಯ ಲಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸ್ಯವು ಮುಖದ ನರನಾಡಿಗಳನ್ನು ಉದ್ದೀಪನಗೊಳಿಸುವದರ ಜೊತೆಗೆ ಮನಸ್ಸನ್ನು ಉಲ್ಲಸಿತ ಸ್ಥಿತಿಯಲ್ಲಿಡುತ್ತದೆ. ಆರೋಗ್ಯದ ಬದುಕಿಗೆ ನಗೆ ದಿವ್ಯ ಔಷಧಿ ಆಗಿದೆ. ಬದುಕಿನ ಅನೇಕ ಸಂದರ್ಭಗಳಲ್ಲಿ ಹಾಸ್ಯ ಸಹಜವಾಗಿ ಹಾಸುಹೊಕ್ಕಾಗಿದೆ. ಅದನ್ನು ಪೂರ್ಣ ಮನಸ್ಸಿನಿಂದ ಆಸ್ವಾದಿಸುವ ಗುಣವನ್ನು ಹೊಂದುವ ಅಗತ್ಯವಿದೆ ಎಂದರು.
    ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಹಾಗೂ ಸಾಹಿತ್ಯ ೇತ್ರದ ಸೇವೆಗೆ “ಕಿತ್ತೂರ ಚನ್ನಮ್ಮ’ ಪ್ರಶಸ್ತಿ ಪಡೆದ ಬರಹಗಾತಿರ್ ವಿ. ವಿ. ಹಿರೇಮಠ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
    ವಿವೇಕಾನಂದಗೌಡ ಪಾಟೀಲ, ಎನ್​.ಎಚ್​. ಹಿರೇಸಕ್ಕರಗೌಡರ, ಶ್ರೀಕಾಂತ ಬಡ್ಡೂರ, ಚಂದ್ರಶೇಖರ ವಸ್ತ್ರದ, ಜಿ. ಬಿ. ಪಾಟೀಲ, ಸಿ. ಎಂ. ಮಾರನಬಸರಿ, ಎಸ್​. ಎಂ. ಕಾತರಕಿ, ರತ್ನಕ್ಕ ಪಾಟೀಲ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts