More

    ಸಮಾಜದ ಮೌಢ್ಯ ನಿವಾರಣೆಗೆ ವಿಜ್ಞಾನ ಸಾಹಿತ್ಯ ಅಗತ್ಯ: ಪ್ರೊ. ಸಿ. ಡಿ. ಪಾಟೀಲ ಅಭಿಮತ

    ವಿಜಯವಾಣಿ ಸುದ್ದಿಜಾಲ ಗದಗ
    ಬದುಕಿನ ಎಲ್ಲ ಸ್ತರದಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ. ವಿಜ್ಞಾನ ಬಿಟ್ಟು ಜೀವನವನ್ನು ನಡೆಸಲು ಸಾಧ್ಯವಿಲ್ಲ. ಪ್ರತಿ ಸಂಗತಿಯ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಅರಿತು, ಆಚರಿಸಿದರೆ ಸಮಾಜ ಸ್ವಾಸ್ಥ$್ಯದಿಂದ ಕೂಡಿರಲು ಸಾಧ್ಯ ಎಂದು ವಿಜ್ಞಾನ ಲೇಖಕ ಪ್ರೊ. ಸಿ.ಡಿ.ಪಾಟೀಲ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತೋಂಟದ ಸಿದ್ಧಲಿಂಗ ಶ್ರೀಗಳು ಕನ್ನಡ ಭವನದಲ್ಲಿ ಬುಧವಾರ ಜರುಗಿದ “ಮಾಸದ ಮಾತು’ ಕಾರ್ಯಕ್ರದಲ್ಲಿ ಮಾತನಾಡಿ, ಮೌಢ್ಯ ಆಚರಣೆಗಳಿಂದ ಜನರನ್ನು ಹೊರತರಲು ವಿಜ್ಞಾನ ಸಾಹಿತ್ಯ ಉಪಯುಕ್ತವಾಗಿದೆ. ವಿಜ್ಞಾನ ಸತ್ಯ ಸಂಗತಿಗಳನ್ನು ಮತ್ತು ಎಲ್ಲರ ಅನುಭವಕ್ಕೆ ಬರುವ ಸಂಗತಿಗಳನ್ನು ಅರುಹುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರತಿದಿನ ಜಗತ್ತು ಹೊಸದಾಗಿ ಕಾಣುತ್ತದೆ. ವಿಜ್ಞಾನದ ಆವಿಷ್ಕಾರಗಳನ್ನು ಮನುಕುಲದ ಒಳಿತಿಗಾಗಿ ಬಳಸಿಕೊಂಡಾಗ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ತಿಳಿಸಿದರು.
    ವಿ. ವಿ. ನಡುವಿನಮನಿ ಮಾತನಾಡಿ, ಜನರು ಮೂಲ ಪರಿಕಲ್ಪನೆಗಳ ಅರಿವನ್ನು ಹೊಂದಿದಾಗ ವೈಜ್ಞಾನಿಕ ಸತ್ಯ ಕಾಣುತ್ತದೆ. ಕನ್ನಡ ವಿಜ್ಞಾನ ಬರಹ ಹೆಚ್ಚು ರೂಪಗೊಂಡು ಜನಸಾಮಾನ್ಯರ ಕೈಗೆ ಸಿಗುವಂತಾಗಬೇಕು. ಸರಳವಾಗಿ ವಿಜ್ಞಾನ ಸಂಗತಿಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪುಸ್ತಕಗಳು ಪ್ರಕಟಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
    ಡಯಟ್​ ಸಂಸ್ಥೆಯ ಉಪನ್ಯಾಸಕ ಶಂಕರ ಹಡಗಲಿ ಮಾತನಾಡಿ, ವೈಜ್ಞಾನಿಕ ಮನೋಭಾವವನ್ನು ಎಲ್ಲರೂ ರೂಢಿಸಿಕೊಂಡಾಗ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರತಿನಿತ್ಯ ಜೀವನದಲ್ಲಿ ನಡೆಯುವ ವಿಷಯಗಳ ಹಿಂದಿರುವ ವಿಜ್ಞಾನದ ಸತ್ಯವನ್ನು ವಿದ್ಯಾಥಿರ್ಗಳಿಗೆ ಸರಳವಾಗಿ ತಿಳಿಸುವದು ಅಗತ್ಯವಿದೆ ಎಂದರು.
    ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ವಿಜ್ಞಾನ, ಗಣಿತದಂತಹ ಪರಿಕಲ್ಪನೆಗಳನ್ನು ಅರಿಯಲು ಸಾಮಾನ್ಯ ಜನರಿಗೆ ಕಷ್ಟ ಎಂಬ ಮನೋಭಾವ ನೆಲೆಗೊಂಡಿದೆ. ಇದನ್ನು ವಿಜ್ಞಾನ ಸಾಹಿತ್ಯದ ಬರಹದಿಂದ ಹೋಗಲಾಡಿಸುವದು ಅಗತ್ಯ. ಕನ್ನಡದ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ನೂರವರ್ಷಗಳ ಇತಿಹಾಸವಿದೆ ಎಂದರು.
    ಕಾರ್ಯಕ್ರಮದಲ್ಲಿ ಪ್ರೊ. ಸಿ.ಡಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರವಿ ದೇವರಡ್ಡಿ, ಡಾ. ದತ್ತಪ್ರಸನ್ನ ಪಾಟೀಲ, ರಾಮಚಂದ್ರ ಮೋನೆ, ಚಂದ್ರಶೇಖರ ವಸ್ತ್ರದ. ಆರ್​.ಎಲ್​.ಪೋಲಿಸಪಾಟೀಲ, ಡಾ. ಜಿ. ಬಿ. ಪಾಟೀಲ, ರತ್ನಕ್ಕ ಪಾಟೀಲ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts