More

    ಹುದ್ದೆಯ ಅಪೇಕ್ಷೆ ಸಲ್ಲದು

    ಭದ್ರಾವತಿ: ಕನ್ನಡ ಸಾಹಿತ್ಯ ಪರಿಷತ್ತು ಒಂದು ಕುಟುಂಬವಿದ್ದಂತೆ. ಇಲ್ಲಿ ಹುದ್ದೆಯ ಅಪೇಕ್ಷೆ ಪಡೆದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
    ನ್ಯೂಟೌನ್ ಕಸಾಪ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಕಸಾಪ ಅಧ್ಯಕ್ಷರ ಪದಗ್ರಹಣ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಂಘ-ಸಂಸ್ಥೆಗಳಲ್ಲಿ ಹುದ್ದೆ ಎಂಬುದು ಒಂದು ರೀತಿಯ ಮುಳ್ಳಿನ ಹಾಸಿಗೆ ಇದ್ದಂತೆ. ಸಕ್ರಿಯವಾಗಿ ಕೆಲಸ ಮಾಡಿದರೆ ಆಗ ಎಲ್ಲರಿಂದ ಪ್ರಶಂಸೆ ಸಿಗುತ್ತದೆ. ಇಲ್ಲದಿದ್ದರೆ ಎಲ್ಲರಿಂದ ಬೈಗುಳ ವ್ಯಕ್ತವಾಗುತ್ತದೆ. ನಿಂದನೆ, ಟೀಕೆಗಳನ್ನು ಕಡೆಗಣಿಸಬೇಕು. ಸಂಘಟನೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    ಇಂದು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಸದ ಪರಿಣಾಮ ವಿದ್ಯಾರ್ಥಿಗಳಿಗೆ ಕನ್ನಡ ಓದಲು, ಬರೆಯಲು, ಸರಿಯಾಗಿ ಮಾತನಾಡಲು ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
    ಲೇಖಕ ಜಿ.ವಿ.ಸಂಗಮೇಶ್ವರ, ಡಾ. ವಾಸುದೇವ ಭೂಪಾಳಂ ದತ್ತಿ ಉಪನ್ಯಾಸ ನೀಡಿದರು. ಕಸಾಪ ತಾಲೂಕು ನೂತನ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಕೆ.ಜಗನ್ನಾಥ್, ಬಿಇಒ ಎ.ಕೆ.ನಾಗೇಂದ್ರಪ್ಪ, ಜÁನಪದ ಪರಿಷತ್ ಅಧ್ಯಕ್ಷ ರೇವಣಪ್ಪ, ಎಂ.ಎಸ್.ಸುಧಾಮಣಿ, ಕೋಗಲೂರು ತಿಪ್ಪೇಸ್ವಾಮಿ, ಟಿ.ಜಿ.ಚಂದ್ರಪ್ಪ, ಎಂ.ಇ.ಜಗದೀಶ್, ತಿಮ್ಮಪ್ಪ , ಡಿ.ನಾಗೋಜಿ ರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts