More

    ಕನಿಷ್ಠ ವೇತನ ನಿಗದಿಪಡಿಸಲು ಒತ್ತಾಯ

    ಕಾರವಾರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.
    ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರದ ಕಾರ್ಮಿಕ ಕಾಯ್ದೆಯನ್ವಯ ಕನಿಷ್ಠ ವೇತನ ನಿಗದಿ ಮಾಡಬೇಕು. ಸಾಮಾಜಿಕ ಭದ್ರತೆ ಸೌಲಭ್ಯ ಒದಗಿಸಬೇಕು. 45 ಮತ್ತು 46ನೇ ರಾಷ್ಟ್ರೀಯ ಕಾರ್ಮಿಕ ಸಮಾವೇಶಗಳ ಶಿಫಾರಸು ಜಾರಿಗೊಳಿಸಬೇಕು. ಪರಿಣಾಮಕಾರಿ ಕೆಲಸದ ಸಲುವಾಗಿ ಹಳೆಯ ಮೊಬೈಲ್ಫೋನ್‌ಗಳನ್ನು ಹಿಂಪಡೆದು ಹೊಸ ಮೊಬೈಲ್ಫೋನ್ ಅಥವಾ ಟ್ಯಾಬ್‌ಗಳನ್ನು ಒದಗಿಸಬೇಕು. ಪೋಷಣ ಅಭಿಯಾನಕ್ಕೆ ಆಧಾರ ಅಥವಾ ದೂರವಾಣಿ ಸಂಖ್ಯೆ ಜೋಡಿಸುವುದು ಕಡ್ಡಾಯ ಎಂಬ ಆದೇಶ ಹಿಂಪಡೆಯಯುವುದು ಸೇರಿ 16 ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಯಮುನಾ ಗಾಂವಕರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮಾಯಾ ಕಾಣೇಕರ, ತಾರಾ ನಾಯ್ಕ, ಮಂಜುಳಾ ಕಾಣಕೋಣಕರ, ಇತರರಿದ್ದರು. ಇದಕ್ಕೂ ಮುನ್ನ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮಾಲಾದೇವಿ ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts