More

    ಕೆಎಸ್‌ಸಿಎಗೆ ಚಿತ್ತಾಕುಲಾ ಕ್ರಿಕೆಟ್‌ ಸ್ಟೇಡಿಯಂ ಜಾಗ ಹಸ್ತಾಂತರ ನಾಡಿದ್ದು

    ಕಾರವಾರ:ಚಿತ್ತಾಕುಲಾ ಕಣಸಗಿರಿ ಸಮೀಪ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದೆ. ಫೆ. 29 ರಂದು ಜಿಲ್ಲಾಡಳಿತವು ಚಿತ್ತಾಕುಲಾದ 11.34 ಎಕರೆ ಜಮೀನನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್(ಕೆಎಸ್‌ಸಿಎ)ಗೆ ಹಸ್ತಾಂತರಿಸಲಿದೆ ಎಂದು ಶಾಸಕ ಸತೀಶ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಚಿತ್ತಾಕುಲಾ ಗ್ರಾಮದ ಸರ್ವೇ ನಂಬರ್ 1144 ಅ ಜಮೀನನ್ನು ಕ್ರಿಕೆಟ್ ಅಸೋಸಿಯೇಶನ್‌ಗೆ ವಾರ್ಷಿಕ ಬಾಡಿಗೆ ಆಧಾರದಲ್ಲಿ ಹಸ್ತಾಂತರಿಸಲು 2018 ರಲ್ಲಿ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು. ಆರ್‌ಟಿಸಿಯಲ್ಲಿ ಗೋಮಾಳ ಶೀರ್ಷಿಕೆಯನ್ನೂ ಕಡಿಮೆ ಮಾಡಿತ್ತು. ಜಮೀನು ಹಸ್ತಾಂತರ ಪ್ರಕ್ರಿಗಳು ಬಾಕಿ ಇದ್ದವು. ಈಗ ಕಾಗದಪತ್ರ ವ್ಯವಹಾರಗಳು ಅಂತಿಮ ಹಂತ ತಲುಪಿದ್ದು,ಫೆ. 29 ರಂದು 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಎಸ್‌ಸಿಎಗೆ ಜಮೀನು ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕೆಎಸ್‌ಸಿಎ ಪರವಾಗಿ ಅಧ್ಯಕ್ಷ ಹಾಗೂ ಟೆಸ್ಟ್ ಕ್ರಿಕೆಟ್ ಮಾಜಿ ಆಟಗಾರ ರಘುರಾಮ ಭಟ್, ಮ್ಯಾನೇಜಿಂಗ್ ಕಮಿಟಿ ಸದಸ್ಯರಾದ ಎಂ.ಎಸ್.ವಿನಯ್, ನಿಖಿಲ್ ಭೂಷಣ್ ಹಾಜರಿದ್ದು, ಜಮೀನು ಹಸ್ತಾಂತರಿಸಿಕೊಳ್ಳುವರು ಎಂದು ಸತೀಶ ಸೈಲ್ ತಿಳಿಸಿದ್ದಾರೆ.
    2013-18 ರ ನನ್ನ ಮೊದಲ ಶಾಸಕತ್ವ ಅವಧಿಯಲ್ಲಿ ಕಾರವಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದೆ. ಸರ್ಕಾರಕ್ಕೆ ಮನವಿ ಮಾಡಿ ಜಮೀನು ನೀಡಲು ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಜಮೀನು ಹಸ್ತಾಂತರವಾಗಿರಲಿಲ್ಲ. 2023 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಶಾಸಕನಾದರೆ ಕ್ರಿಕೆಟ್ ಕ್ರೀಡಾಂಗಣ ಮಾಡುವುದಾಗಿ ಭರವಸೆ ನೀಡಿದ್ದೆ. ಈಗ ಆ ಭರವಸೆ ಈಡೇರುವ ದಿನ ಬಂದಿದೆ ಎಂದು ಶಾಸಕ ಸತೀಶ ಸೈಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಜಮೀನು ಬಿಟ್ಟರೆ ಬೇರೆ ಯಾವುದೇ ರೀತಿಯ ಅತಿಕ್ರಮಣ ಅಥವಾ ಭೂ ಕಬಳಿಕೆ ಮಾಡುವುದಿಲ್ಲ ಎಂದು ಸತೀಶ ಸೈಲ್ ಭರವಸೆ ನೀಡಿದ್ದಾರೆ.

    ಇದನ್ನೂ ಓದಿ:ಅಘನಾಶಿನಿ ನದಿಗೆ ಆರತಿ ಸಮರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts