More

    ಕರುಣ್​ ನಾಯರ್​ಗೆ ಕೋವಿಡ್​-19 ಬಂದಿರಲಿಲ್ಲ, ಕಿಂಗ್ಸ್​ ಇಲೆವೆನ್​ ತಂಡ ಸ್ಪಷ್ಟನೆ

    ಬೆಂಗಳೂರು: ಕರ್ನಾಟಕದ ಬ್ಯಾಟ್ಸ್​ಮನ್​ ಕರುಣ್​ ನಾಯರ್​ಗೆ ಕರೊನಾ ಸೋಂಕು ತಗುಲಿರಲಿಲ್ಲ. ಸಣ್ಣ ಪ್ರಯಾಣದ ಜ್ವರದಿಂದ ಕರುಣ್​ ಚೇತರಿಸಿಕೊಂಡಿದ್ದಾರೆ ಎಂದು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸ್ಪಷ್ಟನೆ ನೀಡಿದೆ. ಕರುಣ್​ ನಾಯರ್​ ಬೆಂಗಳೂರಿನಲ್ಲಿ ತರಬೇತಿ ಆರಂಭಿಸಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಿಗೆ ಕರೊನಾ ಸೋಂಕು ಹರಡಿತ್ತು ಎಂಬುದು ಸತ್ಯಕ್ಕೆ ದೂರವಾದ ವಿಷಯ ಎಂದು ತಂಡದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್​ ಮೆನನ್​ ತಿಳಿಸಿದ್ದಾರೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಆಟಗಾರರು ತಮ್ಮ ನಗರಗಳಲ್ಲೇ ಅಭ್ಯಾಸ ಆರಂಭಿಸಿದ್ದಾರೆ ಎಂದಿದ್ದಾರೆ.

    ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ಮೊದಲ ಶತಕಕ್ಕೆ 30 ವರ್ಷದ ಸಂಭ್ರಮ

    ಬ್ಯಾಟ್ಸ್​ಮನ್​ ಕರುಣ್​ ನಾಯರ್​ಗೆ ಕೋವಿಡ್​-19 ಸೋಂಕು ಕಾಣಿಸಿಕೊಂಡಿತ್ತು. ಚೇತರಿಕೆ ಕಂಡ ಬಳಿಕ ಅಭ್ಯಾಸ ಆರಂಭಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸಿವೆ. ಕರುಣ್​ ನಾಯರ್​ ಕೋವಿಡ್​-19ರ ಸೋಂಕು ತಗುಲಿರಲಿಲ್ಲ. ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು ಎಂದು ಕಿಂಗ್ಸ್​ ಇಲೆವೆನ್​ ಪಂಜಾಬ್​ ಸಿಇಒ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಅಭ್ಯಾಸ ನಡೆಸುವಂತೆ ಆಟಗಾರರಿಗೆ ಸೂಚಿಸಲಾಗಿದೆ ಎಂದರು. ಜತೆಗೆ ತಂಡದ ಮುಖ್ಯಕೋಚ್​ ಅನಿಲ್​ ಕುಂಬ್ಳೆ ಎಲ್ಲ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದು, ವೈಯಕ್ತಿಕವಾಗಿ ಗಮನ ಹರಿಸುತ್ತಿದ್ದಾರೆ. ತಂಡದಲ್ಲಿರುವ ಕರ್ನಾಟಕದ ಎಲ್ಲ 5 ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ ಎಂದು ಮೆನನ್​ ಹೇಳಿದರು. ಈ ಬಾರಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಕ್ಕೆ ಕೆಎಲ್​ ರಾಹುಲ್​ ನಾಯಕತ್ವ ವಹಿಸಲಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಲೌರಾ ಮಾರ್ಷ್ ವಿದಾಯ

    ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ 8 ನೆಟ್​ ಬೌಲರ್​ಗಳನ್ನು ಯುಎಇಗೆ ಕರೆದೊಯ್ಯಲಾಗುವುದು, ಈಗಾಗಲೇ 7 ಮಂದಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು. ದೆಹಲಿ ಹಾಗೂ ಬೆಂಗಳೂರಿನಲ್ಲಿ ಬೌಲರ್​ಗಳು ತಂಡ ಕೂಡಿಕೊಳ್ಳಲಿದ್ದು, ಆಗಸ್ಟ್​ 20 ರಂದು ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಯುಎಇಯಲ್ಲಿ 6 ದಿನಗಳ ಸ್ಥಳಿಯ ಸರ್ಕಾರದ ನಿಯಮದಂತೆ ಕ್ವಾರಂಟೈನ್​ಗೆ ಒಳಗಾಗಲಿದ್ದು, ಬಳಿಕ ಜೈವಿಕ-ಬಬಲ್​ನಲ್ಲಿ ಅಭ್ಯಾಸ ನಡೆಸಲಿದೆ. ದುಬೈ, ಶಾರ್ಜಾ ಹಾಗೂ ಅಬು ಧಾಬಿಯಲ್ಲಿ ಸೆ.19 ರಿಂದ ನ.10 ರವರೆಗೆ 13ನೇ ಐಪಿಎಲ್​ ನಡೆಯಲಿದೆ.

    ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts