More

    ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡಿ; ಶಿಕ್ಷಕರಿಗೆ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ ಸಲಹೆ

    ಕಾರಟಗಿ: ಶಿಕ್ಷಕರು ತಂತ್ರಜ್ಞಾನ ಬಳಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ ಹೇಳಿದರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಸ್ಮಾರ್ಟ್‌ಕ್ಲಾಸ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಕಲಿಕೆ, ಬೌದ್ಧಿಕ ಬೆಳವಣಿಗೆಗಾಗಿ ಸಂಘದಿಂದ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ 600 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ಉಪಕರಣ ವಿತರಿಸಲಾಗಿದೆ. ಅದರಂತೆ ಕಾರಟಗಿ, ಕನಕಗಿರಿ ತಾಲೂಕಿನ 25 ಸರ್ಕಾರಿ ಶಾಲೆಗಳಿಗೂ ಸ್ಮಾರ್ಟ್‌ಕ್ಲಾಸ್ ಪರಿಕರ ನೀಡಿದ್ದು ಶಿಕ್ಷಕರು ಸಮರ್ಪಕವಾಗಿ ಬಳಸಿ ಯೋಜನೆಯ ಉದ್ದೇಶ ಸಾರ್ಥಕಗೊಳಿಸಬೇಕು ಎಂದರು.

    ಸಂಘದ ಜಿಲ್ಲಾ ಸಂಯೋಜಕ ಮಂಜುನಾಥ್ ಮಸ್ಕಿ, ತಾಲೂಕು ಸಂಯೋಜಕರಾದ ಬಸವರಾಜ್ ಹೊಸಮನಿ, ಲೋಕೇಶ್, ಮಂಜುನಾಥ, ಪ್ರವೀಣ್ ಬೆಂಗಳೂರು, ರವಿ ತಿಮ್ಮಾಪುರ, ಚಂದ್ರಶೇಖರ ಅಂಗಡಿ, ಪಂಪಾಪತಿ, ಶಿವಕುಮಾರ್, ಶಿವಪ್ಪ ಜೀರಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts