More

    ಉದ್ಯೋಗ ಯಾವುದೇ ಇರಲಿ ಹಣಕಾಸಿನ ಚಿಂತನೆ ಅವಶ್ಯ

    ಶಿವಮೊಗ್ಗ: ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಪರಿಕಲ್ಪನೆ ಯಶಸ್ವಿಗೆ ಹಣಕಾಸು ನಿರ್ವಹಣೆಯ ಜ್ಞಾನ ಪೂರಕವಾಗಿದೆ ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಹೇಳಿದರು.

    ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸ್ವೇಧ ಮಹಿಳಾ ಉದ್ಯಮಿಗಳ ಸಂಘದಿಂದ ಜನಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಹಣಕಾಸು ಸಾಕ್ಷರತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಹಿಳೆಯರು ಯಾವ ಉದ್ಯೋಗದಲ್ಲಿದ್ದರೂ ಹಣಕಾಸಿನ ಸಮರ್ಪಕ ಬಳಕೆ ಬಗ್ಗೆ ಆಲೋಚನೆ ಮಾಡಬೇಕಾದ್ದು ಅವಶ್ಯ. ಗೃಹಿಣಿಯರು, ಸ್ವಸಹಾಯ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆದಿರುವವರು ಆದಾಯ ಬರುವ ಹಾಗೂ ಅದನ್ನು ನಿರ್ವಹಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.
    ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಉದ್ಯಮಿಗಳಾಗಿ ಹೆಜ್ಜೆ ಇಡುತ್ತಿರುವ ಮಹಿಳೆಯರು ಸಣ್ಣ ಪುಟ್ಟ ಉಳಿತಾಯವನ್ನು ದೊಡ್ಡದಾಗಿ ಬೆಳೆಸಲು ಹಣಕಾಸಿನ ಸಾಕ್ಷರತೆ ಅತ್ಯಂತ ಅವಶ್ಯ. ಅನುಭವ ಇರುವ ಸಾಧಕರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಹಣಕಾಸು ಯೋಜನೆ ಹಾಗೂ ನಿರ್ವಹಣೆ ಕೌಶಲದ ಮಹತ್ವ ತಿಳಿಸುವ ಆಶಯದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
    ಬೆಂಗಳೂರಿನ ಫಿಂಗ್ಯಾನ್ ಅಕಾಡೆಮಿ ಮುಖ್ಯಸ್ಥ ಶ್ರೀಶಾ, ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಖಜಾಂಚಿ ಸಹನಾ ಚೇತನ್, ನಿರ್ದೇಶಕಿ ಸವಿತಾ ಮಾಧವ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts