More

    ಕರ್ನಾಟಕದ ಜನತೆ ಕಾಂಗ್ರೆಸ್​ಗೆ ಮತ ಮಾರಿಕೊಂಡಿದ್ದಾರೆ: ​ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್​

    ಹೈದರಾಬಾದ್​: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿ ನೂತನ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿದೆ.

    ಇನ್ನು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಪರಮಾರ್ಶೆ ನಡೆಸುತ್ತಿದ್ದು ಇತ್ತ ಇದೇ ಪಕ್ಷದ ಉಚ್ಛಾಟಿತ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ಧಾರೆ.

    ಮತ ಮಾರಿಕೊಂಡಿದ್ದಾರೆ

    ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ತೆಲಂಗಾಣ ಗೋಶಾಮಹಲ್ ಕ್ಷೇತ್ರದ ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್​ ಕರ್ನಾಟಕದ ಪ್ರತಿಯೊಬ್ಬ ಜನತೆ ತಮ್ಮ ಮತವನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    Raja singh (1)

    ಜನರು 2,000 ಸಾವಿರ ರೂಪಾಯಿಗೆ ತಮ್ಮ ಮತವನ್ನು ಕಾಂಗ್ರೆಸ್​ಗೆ ಮಾರಿಕೊಂಡಿದ್ದಾರೆ. ಭಜರಂಗದಳವನ್ನು ನಿಷೇಧಿಸುವ ಬಗ್ಗೆ, ಧಾರ್ಮಿಕ ಮತಾಂತರ, ಗೋಹತ್ಯೆ ಹಾಗೂ ಹಿಂದೂ ವಿರೋಧಿಗಳಿಗೆ ಜನತೆ ಹೇಗೆ ಮತ ನೀಡಿದ್ದರೂ ಎಂಬುದು ನನಗೆ ಅರ್ಥವಾಗುತ್ತಿಲ್ಲ.

    ಇದನ್ನೂ ಓದಿ: ಸುರಪುರ ಬಿಜೆಪಿ ಅಭ್ಯರ್ಥಿ ಪರಾಜಿತ; ಕೋಮಾಗೆ ಜಾರಿದ ಮುಖಂಡ

    ಹಣ ಪಡೆದಿದ್ದಾರೆ

    ಕರ್ನಾಟಕದ ಜನತೆ ಕಾಂಗ್ರೆಸ್​ಗೆ ಏಕೆ ಮತ ಹಾಕಿದರೂ ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಧರ್ಮ ಮತ್ತು ರಾಷ್ಟ್ರವನ್ನು ಲೂಟಿ ಮಾಡಿದ ಪಕ್ಷ ಎಂಬುದಕ್ಕಿಂತ ಜನ ಏಕೆ ಹಣ ಪಡೆದರು.

    ಜನ ಪಡೆದಿರುವ ಹಣವನ್ನು ಎಷ್ಟು ದಿನ ಬಳಸುತ್ತಾರೆ. ರಾಷ್ಟ್ರ ವಿರೋಧ ಚಟುವಟಿಕೆಗಳನ್ನು ಬೆಂಬಲಿಸುವ ಕಾಂಗ್ರೆಸ್​ ಪಕ್ಷವ್ವನು ಜನ ಏಕೆ ಆಯ್ಕೆ ಮಾಡಿದರು. ನಾವು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟ್ಟಿದ್ದೇವೆ.

    ಜನ ತಮ್ಮ ಮತವನ್ನು 2,000 ಸಾವಿರ ರೂಪಾಯಿಗೆ ಮಾರಿಕೊಂಡರೆ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯವಾಗುತ್ತದೆ. ಕರ್ನಾಟಕದ ಜನತೆ ನನ್ನಂತಹ ಹಿಂದೂಗಳು ಸೇರಿ ಅನೇಕರು ನಾಚಿಕೆಪಡುವಂತಹ ಕೆಲಸ ಮಾಡಿದ್ಧಾರೆ ಎಂದು ತೆಲಂಗಾಣ ಬಿಜೆಪಿಯ ಉಚ್ಛಾಟಿತ ಶಾಸಕ ರಾಜಾ ಸಿಂಗ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts