More

    ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಇಂದು ಮತದಾನ

    ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಪ್ರಾಯೋಗಿಕ ಪರೀಕ್ಷೆಯೆಂದೇ ವಿಶ್ಲೇಷಿಸಲ್ಪಟ್ಟಿರುವ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಕಣದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಅಭ್ಯರ್ಥಿಗಳ ಭವಿಷ್ಯ ಶನಿವಾರ ಮತಯಂತ್ರ ಸೇರಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದ್ದು, ಸೋಲು, ಗೆಲುವಿನ ಕುತೂಹಲಕ್ಕೆ ತೆರೆ ಬೀಳಲಿದೆ.

    ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ 16 ಹುರಿಯಾಳುಗಳು, 14 ಪಕ್ಷೇತರರು ಸೇರಿದಂತೆ ಒಟ್ಟು 30 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    8260 ಸೇವಾ ಮತದಾರರನ್ನು ಒಳಗೊಂಡಂತೆ ಒಟ್ಟು 22,68,038 ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಿಗಾಗಿ ಮುಖ್ಯ 2,559, ಹೆಚ್ಚುವರಿ 638 ಸೇರಿದಂತೆ ಒಟ್ಟು 3,197 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಬೆಳಗಾವಿ- 12,440, ಮಸ್ಕಿ-2407 ಮತ್ತು ಬಸವಕಲ್ಯಾಣ ಕ್ಷೇತ್ರದ 2117 ಅಂಗವಿಕಲರಿಗೆ ಮತದಾನಕ್ಕೆ ಬೇಕಾದ ಸವಲತ್ತು ಕಲ್ಪಿಸಿ, ನೆರವು ನೀಡುವುದಕ್ಕೆಂದು ಒಟ್ಟು 6,394 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಅಲ್ಲದೆ, ಪ್ರತಿ 1 ಲಕ್ಷ ಮತದಾರರಿಗೆ 2ರಂತೆ ಬೆಳಗಾವಿ-16, ಮಸ್ಕಿ ಹಾಗೂ ಬಸವಕಲ್ಯಾಣ ತಲಾ 2ರಂತೆ ಒಟ್ಟು 20 ‘ಸಖಿ’ ಮತಗಟ್ಟೆ ತೆರೆಯಲಾಗಿದೆ. ಈ ಉಪಚುನಾವಣೆ ಬಲ, ವರ್ಚಸ್ಸು ಹಾಗೂ ಜನಪ್ರಿಯತೆ ವಿಷಯದಲ್ಲಿ ಪ್ರಮುಖ ಮೂರೂ ಪಕ್ಷಗಳ ಸತ್ವಪರೀಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಎಲ್​ಐಸಿ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts