More

    ದೇಶೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಗೆಲುವಿನ ದೀಪಾವಳಿ

    ಗುವಾಹಟಿ: ನಾಯಕ ಮನೀಷ್ ಪಾಂಡೆ (84 ರನ್, 64 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಕರುಣ್ ನಾಯರ್ (72 ರನ್, 53 ಎಸೆತ, 6 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಹಾಗೂ ಕೆಸಿ ಕಾರ್ಯಪ್ಪ (26ಕ್ಕೆ 3) ಸ್ಪಿನ್ ದಾಳಿ ನೆರವಿನಿಂದ ಕರ್ನಾಟಕ ತಂಡ 2021-22ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಶುಭಾರಂಭ ಕಂಡಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಗುರುವಾರ ಆಡಿದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ 9 ರನ್‌ಗಳಿಂದ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿತು.

    ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡ, ಮನೀಷ್-ಕರುಣ್ ನಡುವಿನ 149 ರನ್ ಜತೆಯಾಟದಿಂದ 4 ವಿಕೆಟ್‌ಗೆ 166 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ನಾಯಕ ಅಜಿಂಕ್ಯ ರಹಾನೆ (75 ರನ್, 54 ಎಸೆತ, 6 ಬೌಂಡರಿ, 3 ಸಿಕ್ಸರ್) ಹೋರಾಟದ ಹೊರತಾಗಿಯೂ 6 ವಿಕೆಟ್‌ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

    ರಾಜ್ಯ ತಂಡ ಆರಂಭಿಕರಾದ ಮಯಾಂಕ್ ಅಗರ್ವಾಲ್ (0) ಮತ್ತು ದೇವದತ್ ಪಡಿಕಲ್ (5) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಆಘಾತ ಎದುರಿಸಿದಾಗ ಅನುಭವಿ ಮನೀಷ್-ಕರುಣ್ ಜೋಡಿ ಇನಿಂಗ್ಸ್‌ಗೆ ಮರುಜೀವ ತುಂಬಿತು. ಬಳಿಕ ರಹಾನೆ ಹೋರಾಟದಿಂದ ಮುಂಬೈ ತಂಡ ಜಯದತ್ತ ಸಾಗುತ್ತಿದ್ದಾಗ ಸ್ಪಿನ್ನರ್‌ಗಳಾದ ಕೆಸಿ ಕಾರ್ಯಪ್ಪ ಮತ್ತು ಕೆ. ಗೌತಮ್ (26ಕ್ಕೆ 2) 5 ರನ್ ಅಂತರದಲ್ಲಿ 4 ವಿಕೆಟ್ ಕಬಳಿಸಿ ಪಂದ್ಯವನ್ನು ಕರ್ನಾಟಕದತ್ತ ತಿರುಗಿಸಿದರು.

    ಕರ್ನಾಟಕ: 4 ವಿಕೆಟ್‌ಗೆ 166 (ಮಯಾಂಕ್ 0, ಪಡಿಕಲ್ 5, ಮನೀಷ್ ಪಾಂಡೆ 84, ಕರುಣ್ ನಾಯರ್ 72, ತುಷಾರ್ 38ಕ್ಕೆ 2, ಮೋಹಿತ್ ಅವಸ್ತಿ 32ಕ್ಕೆ 2). ಮುಂಬೈ: 6 ವಿಕೆಟ್‌ಗೆ 157 (ಪೃಥ್ವಿ ಷಾ 4, ರಹಾನೆ 75, ಜೈಸ್ವಾಲ್ 13, ಸಿದ್ದೇಶ್ ಲಾಡ್ 32, ಶಿವಂ ದುಬೆ 3, ಆದಿತ್ಯ ತಾರೆ 12*, ಕೆಸಿ ಕಾರ್ಯಪ್ಪ 26ಕ್ಕೆ 3, ಕೆ. ಗೌತಮ್ 26ಕ್ಕೆ 2, ವಿದ್ಯಾಧರ್ 25ಕ್ಕೆ 1).

    *ಕರ್ನಾಟಕದ ಇಂದಿನ ಪಂದ್ಯ
    ಎದುರಾಳಿ: ಛತ್ತೀಸ್‌ಗಢ
    ಆರಂಭ: ಬೆಳಗ್ಗೆ 8.00

    ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೊಸ ಕೋಚ್; ಹುದ್ದೆಯ ಅವಧಿ, ವೇತನ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts