More

    ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‌ಕುಮಾರ್

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು: ಭಾರತ ತಂಡದ ಮಾಜಿ ವೇಗದ ಬೌಲರ್ ಆರ್.ವಿನಯ್‌ಕುಮಾರ್ ಶುಕ್ರವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿ ವಿನಯ್‌ಕುಮಾರ್ ಕಳೆದ 25 ವರ್ಷಗಳ ಕ್ರಿಕೆಟ್ ಜರ್ನಿಗೆ ಟ್ವಿಟರ್ ಮೂಲಕ ವಿದಾಯ ಹೇಳಿದ್ದಾರೆ. ಒಂದೂವರೆ ಪುಟದ ಪತ್ರದಲ್ಲಿ ಕ್ರಿಕೆಟ್ ಜರ್ನಿ ಕುರಿತು ಮೆಲುಕು ಹಾಕಿರುವ ಆರ್.ವಿನಯ್‌ಕುಮಾರ್, ಈ ವೇಳೆ ಹಲವು ಮಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದರು. ವಿನಯ್ ಕುಮಾರ್ ಸಾರಥ್ಯದಲ್ಲಿ ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿತ್ತು. ಪ್ರತಿಷ್ಠಿತ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಕಪ್ ಜಯಿಸಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಕರ್ನಾಟಕ ತಂಡದ ಪರ 100ನೇ ರಣಜಿ ಪಂದ್ಯವನ್ನಾಡಿದ್ದರು. 2019ರಲ್ಲಿ ಪುದುಚೇರಿಗೆ ವಲಸೆ ಹೋಗಿದ್ದರು.

    ಇದನ್ನೂ ಓದಿ: ನಟ ಹೃತಿಕ್ ರೋಶನ್ ಗೆ ಸಮನ್ಸ್ ನೀಡಿದ ಮುಂಬೈಪೋಲಿಸ್ 

    ರಾಷ್ಟ್ರೀಯ ತಂಡದ ಪರ ಏಕೈಕ ಟೆಸ್ಟ್ ಆಡಿರುವ ವಿನಯ್ ಕುಮಾರ್ , 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ ಏಕೈಕ ವಿಕೆಟ್, 31 ಏಕದಿನ ಪಂದ್ಯಗಳಿಂದ 38 ವಿಕೆಟ್ ಹಾಗೂ 9 ಟಿ20 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದರು. 2011ರಲ್ಲಿ ದೆಹಲಿ ಎದುರು ಇಂಗ್ಲೆಂಡ್ ವಿರುದ್ಧ 30ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು ವಿನಯ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಕೊಚ್ಚಿ ಟಸ್ಕರ್ಸ್‌, ಕೋಲ್ಕತ ನೈಟ್ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ವಿನಯ್‌ಕುಮಾರ್ ಬೆಳಗಾವಿ ಪ್ಯಾಂಥರ್ಸ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ ತಂಡದ ಪರ ಆಡಿದ್ದರು.

    ಟೆಸ್ಟ್ : 1, ರನ್: 11, ವಿಕೆಟ್: 1
    ಏಕದಿನ: 31, ರನ್: 86, ವಿಕೆಟ್ : 38, ವೈಯಕ್ತಿಕ ಶ್ರೇಷ್ಠ: 30ಕ್ಕೆ 4
    ಟಿ20: 9, ರನ್: 2, ವಿಕೆಟ್ : 10, ವೈಯಕ್ತಿಕ ಶ್ರೇಷ್ಠ : 24ಕ್ಕೆ 3
    ——————–
    ಪ್ರಥಮ ದರ್ಜೆ: 139, ರನ್: 3311, ಶತಕ: 2, ವಿಕೆಟ್: 504, ವೈಯಕ್ತಿಕ ಶ್ರೇಷ್ಠ : 32ಕ್ಕೆ 8
    ಲಿಸ್ಟ್ ಎ: 141, ರನ್: 1198, ವಿಕೆಟ್: 225, ವೈಯಕ್ತಿಕ ಶ್ರೇಷ್ಠ : 34ಕ್ಕೆ 5
    ಟಿ20: 181, ರನ್: 861, ವಿಕೆಟ್: 194, ವೈಯಕ್ತಿಕ ಶ್ರೇಷ್ಠ : 4ಕ್ಕೆ 4
    ಐಪಿಎಲ್: 105, ರನ್: 310, ವಿಕೆಟ್: 105 , ವೈಯಕ್ತಿಕ ಶ್ರೇಷ್ಠ : 40ಕ್ಕೆ 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts