ಬೆಂಗಳೂರು: ಈ ಸುದ್ದಿ ನೋಡಿದ್ರೆ ಮದ್ಯಪ್ರಿಯರು ನಿದ್ದೆಯಿಂದೇಳುತ್ತಾರೆ, ಕಾರಣ ನಾಳೆ ರಾತ್ರಿಯಿಂದ ಮದ್ಯದಂಗಡಿಗಳು ಬಾಗಿಲು ಹಾಕಲಿವೆ. ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಜ.7) ರಾತ್ರಿ 8 ಗಂಟೆಯಿಂದ ಸೋಮವಾರ (ಜ.10) ಮುಂಜಾನೆ 5 ಗಂಟೆವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
ಒಂದು ವೇಳೆ ಕರ್ಫ್ಯೂ ಉಲ್ಲಂಘಿಸಿ ಕಾರ್ಯನಿರ್ವಹಿಸುವ ಮದ್ಯದಂಗಡಿಗಳ ಲೈಸೆನ್ಸ್‌ಗಳನ್ನು ಅಮಾನತು ಅಥವಾ ರದ್ದುಪಡಿಸಬೇಕೆಂದು ಇಲಾಖೆ ಆಯಾ ಜಿಲ್ಲೆಯು ಉಪ ಆಯಕ್ತರಿಗೆ ಸೂಚಿಸಿದೆ. ಉಳಿದ ದಿನಗಳಲ್ಲಿ ಆರಂಭಿಕ ವ್ಯವಹಾರದ ವೇಳೆಯಿಂದ ರಾತ್ರಿ 10 ಗಂಟೆವೆರೆಗೆ ಮದ್ಯ ಮಾರಾಟ ಮಾಡಬಹುದು.
ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಶೇ. 50 ರಷ್ಟು ಗ್ರಾಹಕರು ಮದ್ಯ ಸೇವಿಸಬೇಕು. ಕಡ್ಡಾಯವಾಗಿ ಕರೊನಾ ಮಾರ್ಗಸೂಚಿಗಳನ್ನು ಮಾಲೀಕರು ಪಾಲಿಸಬೇಕು. ಇಲ್ಲದಿದ್ದರೆ ಅಂಗಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.
ನಾನು ಜೀವಂತವಾಗಿ ವಾಪಸ್ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್: ಪಂಜಾಬ್ ಸಿಎಂಗೆ ಪ್ರಧಾನಿ ಟಾಂಗ್