More

    8ನೇ ಬಾರಿ ಬಜೆಟ್​ ಮಂಡನೆ: ಬಸವಳಿಯದ ಬಿಎಸ್‌ವೈ

    ಬೆಂಗಳೂರು: ಎಂಟನೇ ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಡಳಿತ ನಿರ್ವಹಣೆ ಮತ್ತು ರಾಜಕೀಯದಲ್ಲಿ ತಮ್ಮ ಉತ್ಸಾಹ ಇನ್ನೂ ಬತ್ತಿಲ್ಲ ಎಂಬುದನ್ನು ತೋರಿಸಿಕೊಟ್ಟರು.

    ಸೋಮವಾರ ಮಧ್ಯಾಹ್ನ 12.05ಕ್ಕೆ ಬಜೆಟ್ ಭಾಷಣ ಆರಂಭಿಸಿದ ಬಿಎಸ್​ವೈ, 105 ಪುಟಗಳನ್ನು ಬರೋಬ್ಬರಿ ಎರಡು ತಾಸಲ್ಲಿ ಓದಿ ಮುಗಿಸಿದರು. ವಯೋಸಹಜ ಕಾರಣಗಳನ್ನು ಎಲ್ಲೂ ತೋರ್ಪಡಿಸಲಿಲ್ಲ. ಮಧ್ಯದಲ್ಲಿ ನೀರು ಕುಡಿದು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

    8ನೇ ಬಾರಿ ಬಜೆಟ್​ ಮಂಡನೆ: ಬಸವಳಿಯದ ಬಿಎಸ್‌ವೈಈ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆರಂಭದಲ್ಲೇ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಮಾತ್ರ ಪೂರ್ಣ ಅವಧಿ ಕಲಾಪದಲ್ಲಿ ಉಳಿದುಕೊಂಡರು.

    ಆಡಳಿತ ಪಕ್ಷದ ಶಾಸಕರು ತಮ್ಮ‌ ಕ್ಷೇತ್ರ ಅಥವಾ ತಮ್ಮ ಸಮಾಜದ ಕುರಿತ ಯೋಜನೆಗಳು ಘೋಷಣೆಯಾದಾಗ ಅಲ್ಲೊಬ್ಬ ಇಲ್ಲೊಬ್ಬರು ಮೇಜು ಕುಟ್ಟಿ ಸಂತಸ ಹೊರಹಾಕಿದ್ದು ಕಂಡುಬಂತು. ಹಾಗೆಯೇ ಭಾಷಣ ಮುಗಿಸುತ್ತಿದ್ದಂತೆ ಸಚಿವ ವಿ.ಸೋಮಣ್ಣ, ಡಿಸಿಎಂ‌ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ‌ ಅವರು ಮುಖ್ಯಮಂತ್ರಿಯನ್ನು ಅಭಿನಂದಿಸಿದರು.‌ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸಿಎಂ‌ ಕುಟುಂಬ ಸದಸ್ಯರು ಬಜೆಟ್ ಭಾಷಣ ಆಲಿಸಿದರು.

    ರಾಜ್ಯದಲ್ಲಿ ಸ್ಥಾಪನೆ ಆಗಲಿದೆ ತಾಯಂದಿರ ಎದೆಹಾಲಿನ ಬ್ಯಾಂಕ್​

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts