More

    ಒಂದು ಅಂಕಕ್ಕಾಗಿ ಹನ್ನೊಂದು ಅಂಕ ಕಳೆದುಕೊಂಡ ವಿದ್ಯಾರ್ಥಿನಿ!

    ಹೊಸನಗರ: ದ್ವಿತೀಯ ಪಿಯು ಪರೀಕ್ಷೆ ಲೆಕ್ಕಶಾಸ್ತ್ರ ವಿಷಯದಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿ, ನೂರಕ್ಕೆ ನೂರಕ್ಕೆ ಬರುವ ಮಹತ್ತರ ನಂಬಿಕೆಯಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ ಬರೋಬ್ಬರಿ 11 ಅಂಕ ಕಳೆದುಕೊಂಡಿದ್ದಾರೆ.

    ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾರಣಗಿರಿಯ ಧಾರಿಣಿ ಎಂಬಾಕೆ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಶೇ.96 ಫಲಿತಾಂಶ ಪಡೆದಿದ್ದರು. ಲೆಕ್ಕಶಾಸ್ತ್ರದಲ್ಲಿ 99 ಅಂಕ ಲಭಿಸಿತ್ತು. 100 ಅಂಕ ಬರುವ ವಿಶ್ವಾಸದಲ್ಲಿದ್ದ ವಿದ್ಯಾರ್ಥಿನಿ ಉತ್ತರ ಪತ್ರಿಕೆ ನಕಲು ಪ್ರತಿ ಪಡೆದು ಪರಿಶೀಲನೆ ಮಾಡಿದಾಗ 100 ಅಂಕ ಬರುವುದು ಖಾತ್ರಿಯಾಗಿತ್ತು. ಹಾಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿರಿ ಕಾಂಗ್ರೆಸ್​ ಮುಖಂಡನಿಗೆ ‘ಇಡಿ’ ನೋಟಿಸ್​, ಡಿಕೆಶಿಗೆ ಮತ್ತೆ ಸಂಕಷ್ಟ

    ಮರುಮೌಲ್ಯಮಾಪನದ ನಂತರ ಲೆಕ್ಕಶಾಸ್ತ್ರದಲ್ಲಿ ಧಾರಿಣಿಗೆ 1 ಅಂಕ ಹೆಚ್ಚಾಗುವ ಬದಲು ಮತ್ತೆ 11 ಅಂಕ ಕಡಿಮೆ ಆಗಿದೆ. ಮೊದಲು 99 ಪಡೆದಿದ್ದ ಆಕೆಗೆ, ಮರುಮೌಲ್ಯಮಾಪನದ ಬಳಿಕ 88 ಅಂಕ ಬಂದಿದೆ.

    ಮರುಮೌಲ್ಯಮಾಪನದಲ್ಲಿ 100ಕ್ಕೆ 100 ಅಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿ ಕಡಿಮೆ ಅಂಕ ಬಂದಿದ್ದರಿಂದ ಪಾಲಕರೊಂದಿಗೆ ಪಿಯು ಮಂಡಳಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಇದು ಪಿಯು ಮಂಡಳಿಯ ನಿರ್ಲಕ್ಷ್ಯ ಎನ್ನಲಾಗಿದೆ. ನ್ಯಾಯಕ್ಕಾಗಿ ವಿದ್ಯಾರ್ಥಿನಿಯ ತಂದೆ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ರಾತ್ರೋರಾತ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ನುಗ್ಗಿದ್ದ ದುಷ್ಕರ್ಮಿ ಕಥೆ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts