More

    ಸಿದ್ಧಶ್ರೀ ಕಂಪನಿ ತ್ಯಾಜ್ಯ ನದಿಗೆ ಹರಿಸಬೇಡಿ

    ಚಿಂಚೋಳಿ: ಭೋಗಾವತಿ ನದಿಗೆ ಸಿದ್ಧಶ್ರೀ ಕಂಪನಿಯ ಕಲುಷಿತ ನೀರು ಹರಿಸಲಾಗುತ್ತಿದ್ದು, ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ತ್ಯಾಜ್ಯ ಹರಿಸುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸಿಲ್ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಸಿದ್ಧಶ್ರೀ ಇಥೆನಾಲ್ ಮತ್ತು ಪವರ್ ಕಂಪನಿ ಸ್ಥಾಪನೆಗೊಂಡಿರುವುದು ಸಂತಸದ ಸಂಗತಿಯಾಗಿದೆ. ಆದರೆ ಜಲಚರಗಳು, ಜಾನವಾರುಗಳು, ಸಾರ್ವಜನಿಕರ ಜೀವದ ಜತೆ ಚಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.

    ಕಂಪನಿಯ ಕಲುಷಿತ ನೀರು ಭೋಗಾವತಿ ನದಿಗೆ ಬಿಡುತ್ತಿದ್ದು, ಇದರಿಂದ ಜಲಚರಗಳು, ಜಾನುವಾರಗಳಿಗೆ ಮೃತಪಡುತ್ತಿವೆ. ಈ ಸಾವು- ನೋವುಗಳಿಗೆ ಯಾರು ಹೊಣೆ? ಕಲುಷಿತ ಗ್ಯಾಸ್ ಸಹ ಹೊರಬಿಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಮಾರಕ ರೋಗಗಳು ಹರಡುವ ಸಾಧ್ಯತೆ ಇದೆ. ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಉಸ್ತವಾರಿ ಸಚಿವರು ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಪ್ರಮುಖರಾದ ಜಾಫರಖಾನ್ ಮಿರಿಯಾಣ, ಪ್ರಭು ಪ್ಯಾರಬದಿ, ಹಣಮಂತ ಪೂಜಾರಿ, ಶಂಕರಯ್ಯ ಸ್ವಾಮಿ, ಸಿದ್ದಲಿಂಗಯ್ಯ ಸ್ವಾಮಿ, ಜಿ.ಪರಮೇಶ್ವರ ಕಾಂತಾ, ಶೇಖರಗೌಡ ಮಿರಿಯಾಣ, ಹಾಶಣ್ಣ ಮಿರಿಯಾಣ, ನಾಗಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts