More

    ಅಮಿತ್ ಷಾ ಮುಂದೆ ರಾಜ್ಯದ ಅಪರಾಧ ಪತ್ತೆ ಸಾಮರ್ಥ್ಯ ಪ್ರದರ್ಶನ: ಗಮನ ಸೆಳೆದ ‘ವಿಜಯವಾಣಿ’ ವರದಿ

    ಬೆಂಗಳೂರು: ‘ಡ್ರಗ್ಸ್ ಜಾಲ ಭೇದಿಸಿದ್ದು, ಐಸಿಸಿ ನಂಟು ಕಂಡುಕೊಂಡಿದ್ದು, ಛೋಟಾ ರಾಜನ್ ಬಂಧನ..’ ಹೀಗೆ ರಾಜ್ಯ ಪೊಲೀಸರ ಇತ್ತೀಚಿನ ಸಾಧನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪರಿಚಯಿಸುವ ಪ್ರಯತ್ನವೊಂದನ್ನು ರಾಜ್ಯ ಸರ್ಕಾರ ಶನಿವಾರ ಮಾಡಿತು.

    ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದ ಮುಂಭಾಗದಲ್ಲಿ ಪೊಲೀಸ್ ಇಲಾಖೆಯು ಭೌತಿಕವಾಗಿ ಮತ್ತು ವರ್ಚುಯಲ್ ಆಗಿ ತನ್ನ ಸಾಧನೆ ಬಿಂಬಿಸಿಕೊಳ್ಳಲು ವ್ಯವಸ್ಥೆ ಮಾಡಿ, ಕೇಂದ್ರ ಗೃಹ ಸಚಿವರಿಗೆ ಅತಿ ಸಲೀಸಾಗಿ ಅರ್ಥೈಸಲು ಪ್ರಯತ್ನಿಸಿತು. ಆ ವಸ್ತುಪ್ರದರ್ಶನದಲ್ಲಿ ‘ವಿಜಯವಾಣಿ’ಯ ವರದಿಯೂ ಗಮನ ಸೆಳೆಯಿತು. ಡ್ರಗ್ಸ್ ತನಿಖೆಯ ಸಂದರ್ಭದಲ್ಲಿ ‘ವಿಜಯವಾಣಿ’ ಪ್ರಕಟಿಸಿದ ‘ಚಂದನವನಕ್ಕೆ ನಶೆ ನಂಟು’ ವರದಿಯನ್ನು ಅಲ್ಲಿ ಪ್ರದರ್ಶಿಸಲಾಗಿತ್ತು.

    ಒಂದು ವರ್ಷದೀಚೆಗೆ ಡ್ರಗ್ಸ್ ವಿಚಾರದಲ್ಲಿ ರಾಜ್ಯ ಪೊಲೀಸರು ಯಾವ ರೀತಿ ಕಾರ್ಯಾಚರಣೆ ಮಾಡಿದರು, ಯಾವೆಲ್ಲ ದೇಶದಿಂದ ಡ್ರಗ್ಸ್ ಬರುತ್ತಿತ್ತು, ಯಾವ ರೂಪದಲ್ಲಿ ಬರುತ್ತಿತ್ತು, ಇಲ್ಲಿ ಯಾರೆಲ್ಲ ಸಿಕ್ಕಿಬಿದ್ದಿದ್ದಾರೆ ಎಂಬಿತ್ಯಾದಿ ಅಂಶಗಳನ್ನು ಸರಳವಾಗಿ ತಿಳಿಸುವ ಪ್ರಯತ್ನ ಮಾಡಿ, ವಶಕ್ಕೆ ಪಡೆದ ಟನ್‌ಗಟ್ಟಲೆ ಡ್ರಗ್ಸ್ ಪ್ರದರ್ಶನಕ್ಕಿಡಲಾಗಿತ್ತು.

    ಹೊಸ ಹೊಸ ರೂಪದಲ್ಲಿ ಡ್ರಗ್ಸ್ ಸರಬರಾಜಾಗುತ್ತಿದ್ದುದು ಮತ್ತು ಅದರ ಮೌಲ್ಯ, ಪೆಡ್ಲರ್‌ಗಳ ಬೇಟೆಯಾಡಿದ್ದನ್ನು ಚಿತ್ರ ಸಹಿತ ವಿವರಿಸಲಾಗಿತ್ತು. ಕೆನಡಾ, ಮೆಕ್ಸಿಕೊ, ಕೊಲಂಬಿಯ, ತಾಂಜೇನಿಯಾ, ಕೀನ್ಯಾ, ನೈಜೀರಿಯಾ ಸೇರಿ ಹತ್ತು ಹಲವು ದೇಶಗಳೊಂದಿಗೆ ಕರ್ನಾಟಕಕ್ಕೆ ಮಾದಕವಸ್ತು ಸರಬರಾಜಾಗುತ್ತಿರುವುದನ್ನು ಪತ್ತೆ ಹಚ್ಚಿದ್ದಲ್ಲದೇ ಆ ದೇಶದ ತಪ್ಪಿಸ್ಥರ ಬಂಧನವನ್ನು ವಶಪಡಿಸಿಕೊಂಡ ವಸ್ತು ಮತ್ತು ಮ್ಯಾಪ್ ಸಹಿತ ತಿಳಿಸಿಕೊಡಲಾಗಿತ್ತು.

    ಹಾಗೆಯೇ ದೇಶದೊಳಗಿನ ಸರಬರಾಜನ್ನು ವಿವರಿಸಿ ಗಂಭೀರತೆ ತಿಳಿಸಿಕೊಡಲಾಗಿತ್ತು. ರಾಜಸ್ತಾನ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ಒಡಿಶಾ, ಛತ್ತಿಸ್‌ಗಡ, ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್‌ನಿಂದ ಮಾದಕವಸ್ತು ಜಾಲದ ಸಂಪರ್ಕದ ಕುರಿತ ಮಾಹಿತಿಯನ್ನು ಅನಾವರಣಗೊಳಿಸಲಾಗಿತ್ತು. ಇದಿಷ್ಟೇ ಅಲ್ಲದೆ ಪೊಲೀಸರಿಗೆ ವಸತಿ ವ್ಯವಸ್ಥೆ ಪರಿಣಾಮಕಾರಿ ಅನುಷ್ಠಾನ, ಭವಿಷ್ಯದ ಯೋಜನೆ ಕುರಿತಂತೆಯೂ ತಿಳಿಸಿಕೊಡಲಾಗಿತ್ತು. ರಾಜ್ಯಕ್ಕೆ ಐಸಿಸ್ ನಂಟು ಕಂಡುಕೊಂಡು ಅದನ್ನು ಭೇದಿಸಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದ ಕುರಿತು ಫೋಟೋ ಸಹಿತ ವಿವರಿಸಲಾಗಿತ್ತು. ಅದೇ ರೀತಿ ಸೆನೆಗಲ್‌ನಲ್ಲಿ ಛೋಟಾ ರಾಜನ್ ಬಂಧನದ ಫೋಟೋಗಳನ್ನು ಪ್ರಕಟಿಸಲಾಗಿತ್ತು.

    ನಾಳೆ ಅಮಿತ್ ಷಾ ಮುಂದೆಯೇ ಸಿ.ಡಿ. ಬಿಡುಗಡೆ ಮಾಡ್ತಾರಂತೆ ಮುರುಗೇಶ್ ನಿರಾಣಿ!

    ಮದ್ವೆ ಆಗು ಎಂದಿದ್ದಕ್ಕೆ ಕೊಂದೇಬಿಟ್ಟ, ಶವ ಬಾತ್​​ರೂಮಲ್ಲಿಟ್ಟು ಕಾಂಕ್ರೀಟ್​ ಕಟ್ದ; ಎರಡೂವರೆ ತಿಂಗಳ ಬಳಿಕ ಸಿಕ್ಕಿಹಾಕಿಕೊಂಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts