More

    ಕನ್ನಡದಲ್ಲೇ ಈ ಸಲ ಕಪ್​ ನಮ್ದೆ ಎಂದ ಎಬಿ ಡಿವಿಲಿಯರ್ಸ್​; ನೋಡ ನೋಡ ಎಷ್ಟು ಚೆಂದ ಎಂದ ಫ್ಯಾನ್ಸ್​

    ನವದೆಹಲಿ: ಐಪಿಎಲ್ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಭಾರತದ ಕ್ರಿಕೆಟ್​ ಅಭಿಮಾನಿಗಳು ವಿದೇಶಿ ಆಟಗಾರರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಎಬಿ ಡಿವಿಲಿಯರ್ಸ್​, ಕ್ರಿಸ್​ ಗೇಲ್​, ಡೇವಿಡ್​ ವಾರ್ನರ್​ ಸೇರಿದಂತೆ ಅನೇಕರ ಹೆಸರು ಮೊದಲಿಗೆ ಕೇಳಿ ಬರುತ್ತದೆ. ಆದರೆ, ಎಬಿ ಡಿವಿಲಿಯರ್ಸ್​ ಕಂಡರೆ ನಮ್ಮ ಆರ್​ಸಿಬಿ ಅಭಿಮಾನಿಗಳು ವಿಶೇಷವಾದ ಅಭಿಮಾನವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.

    ಇದೀಗ ಎಬಿ ಡಿವಿಲಿಯರ್ಸ್​ ಆರ್​ಸಿಬಿ ಅಭಿಮಾನಿಗಳ ಪ್ರಸಿದ್ಧ ಘೋಷವಾಕ್ಯ ಈ ಸಲ ಕಪ್​ ನಮ್ದೆ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಪಾಲಿನ ಆಪತ್ಭಾಂದವ ಈ ಹೇಳಿಕೆ ನೀಡಿರುವುದು ಅಭಿಮಾನಿಗಳ ಜೋಷ್​​ಅನ್ನು ಇನ್ನಷ್ಟು ಹೆಚ್ಚಿಸಿದೆ.

    ಇದನ್ನೂ ಓದಿ: ಸತ್ಯ ಆದಷ್ಟು ಬೇಗ ಹೊರಬರಲಿದೆ; ಅಶ್ಲೀಲ ವಿಡಿಯೋ ಕುರಿತು ಮೌನಮುರಿದ ಪ್ರಜ್ವಲ್​ ರೇವಣ್ಣ

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ವಾಟರ್​ ಆ್ಯಕ್ಟಿವಿಟಿಯಲ್ಲಿ ಪಾಲ್ಗೊಂಡಿರುವ ಎಬಿ ಡಿವಿಲಿಯರ್ಸ್​ ಸಡನ್​ ಆಗಿ ಈ ಸಲ ಕಪ್​ ನಮ್ದೆ ಎಂದು ಜೋರಾಗಿ ಕೂಗುವುದನ್ನು ನೋಡಬಹುದಾಗಿದೆ. ಈ ವಿಡಿಯೋಗೆ ಅಭಿಮಾನಿಗಳ ವತಿಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಎಲ್ಲರೂ ನಿಮ್ಮ ಆಸೆಯಂತೆ ಆಗಲಿ, ನೋಡ ನೋಡ ಎಷ್ಟು ಚೆಂದ ಎಂದು ಕಮೆಂಟ್ ಹಾಕಿದ್ದಾರೆ.

    17ನೇ ಆವೃತ್ತಿಯ ಐಪಿಎಲ್​ನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 7ರಲ್ಲಿ ಸೋತು 3ರಲ್ಲಿ ಜಯ ಸಾಧಿಸಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಆರ್​ಸಿಬಿ ಪ್ಲೇಆಫ್​ ಕನಸು ಸ್ವಲ್ಪಮಟ್ಟಿಗೆ ಜೀವಂತವಾಗಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts