More

    ಬೀದಿ ಬದಿ ಅಂಗಡಿ ತೆರವು ಕಾರ್ಯ ಸಲ್ಲ

    ಲಿಂಗಸುಗೂರು: ಬಡ ವ್ಯಾಪಾರಿಗಳ ರಕ್ಷಣೆ ಮಾಡಲು ಆಗ್ರಹಿಸಿ ಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

    ಬಡ ವ್ಯಾಪಾರಿಗಳ ರಕ್ಷಣೆ ಮಾಡಿ

    ಪಟ್ಟಣದ ಪುರಸಭೆ ವ್ಯಾಪ್ತಿಯ ಹೆದ್ದಾರಿ (150-ಎ) ಅಗಲೀಕರಣ ಕಾಮಗಾರಿ ನಡೆದಿದೆ. ಯಾವುದೇ ಕಾರಣಕ್ಕೂ ಬಸವಸಾಗರ ವೃತ್ತದಿಂದ ಬೆಂಗಳೂರು ಬೈಪಾಸ್ ಹೆದ್ದಾರಿ ಮಾರ್ಗದ ಬೀದಿ ಬದಿ ವ್ಯಾಪಾರಿ ಅಂಗಡಿಗಳನ್ನು ತೆರವುಗೊಳಿಸಬಾರದು. ಪುರಸಭೆಯಿಂದ ಗುರುತಿನ ಚೀಟಿ ಪಡೆದು ಪಿಎಂ ಆತ್ಮನಿರ್ಭರ ಯೋಜನೆಯಡಿ ಪ್ರತಿ ವ್ಯಾಪಾರಿ ಕನಿಷ್ಠ 20 ರಿಂದ 50 ಸಾವಿರ ರೂ. ಸಾಲ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಐಎಂಎ ಕಾಯ್ದೆ ಪ್ರಕಾರ 9 ರಿಂದ 15 ಮೀಟರ್ ರಸ್ತೆ ಅಗಲೀಕರಣ ನಡೆದರೆ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಿರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಡಿಕೆಶಿ ವಿರುದ್ಧದ ಸಿಬಿಐ ಕೇಸ್​ ವಾಪಸ್; ಸರ್ಕಾರದ ಕ್ರಮ ಖಂಡಿಸಿ ಹೈಕೋರ್ಟ್​ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ್

    ಪುರಸಭೆ ಅಧಿಕಾರಿಗಳು ಬಡ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೆ ಅಂಗಡಿಗಳನ್ನು ತೆರವುಗೊಳಿಸಿ, ರಸ್ತೆ ಬದಿ ವ್ಯಾಪಾರ ಕಾಯ್ದೆ ಉಲ್ಲಂಘಿಸಿದ್ದಾರೆ. ಕೆಲವೆಡೆ ಹೆದ್ದಾರಿ ಅಕ್ಕ ಪಕ್ಕ ಪುಟ್‌ಪಾತ್ ಕೂಡ ನಿರ್ಮಿಸದೆ ಚರಂಡಿ ಮೇಲೆ ವ್ಯಾಪಾರ ನಡೆಸಲು ಖಾಸಗಿ ವಾಣಿಜ್ಯ ಅಂಗಡಿಗಳ ಮಾಲೀಕರು ಅವಕಾಶ ನೀಡುತ್ತಿಲ್ಲ. ಕೂಡಲೇ ಪುರಸಭೆ ಅಧಿಕಾರಿಗಳಿಗೆ ಮೇಲಧಿಕಾರಿಗಳು ನಿರ್ದೇಶನ ನೀಡಿ ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

    ಮಹಾಮಂಡಳಿ ತಾಲೂಕು ಅಧ್ಯಕ್ಷ ಮಹಿಬೂಬ ಪಾಷಾ, ಪ್ರಧಾನ ಕಾರ್ಯದರ್ಶಿ ಹಸ್ಮತ್, ಪ್ರಮುಖರಾದ ಬಸವರಾಜ ಹಿರೇಮಠ, ಪಂಪಣ್ಣ ಹೂಗಾರ, ಶರಣಪ್ಪ ಮಾಲಿ, ಮಲ್ಲಿಕಾರ್ಜುನ ಬಿರಾದಾರ, ಮುರಾಮುಲ್ಲಾ ಪಾಶಾ, ಶರಣಪ್ಪ ಹುನಕುಂಟಿ, ಹುಸೇನಪ್ಪ ನಾಯಕ, ಮಲ್ಲಪ್ಪ ಬಂಡಿ, ಜಗನ್ನಾಥ ಜಾಧವ್, ಮಹಾಂತೇಶ, ಕೇಶವ ರಾಠೋಡ್, ಶರಣಪ್ಪ, ವಿಷ್ಣು, ಅಲ್ಲಾವುದ್ದಿನ್, ಅಲ್ಲಾಭಕ್ಷ, ಅಮರೇಶ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts