More

    ರಾಜ್ಯದಲ್ಲಿಂದು 1,977 ಕರೊನಾ ಪ್ರಕರಣ ದೃಢ; ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

    ಬೆಂಗಳೂರು: ರಾಜ್ಯದಲ್ಲಿ ಇಂದು 1,977 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,78,564ಕ್ಕೆ ಏರಿಕೆಯಾಗಿದೆ. 48 ಸೋಂಕಿತರು ಕಳೆದ 24 ಗಂಟೆಗಳಲ್ಲಿ ಕೊನೆಯುಸಿರೆಳೆದಿದ್ದು, ಒಟ್ಟಾರೆ ಮೃತರ ಸಂಖ್ಯೆ 36,037ಕ್ಕೆ ಹೆಚ್ಚಳವಾಗಿದೆ.


    ಒಂದೇ ದಿನದಲ್ಲಿ 3,188 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಗುಣಮುಖವಾದವರ ಸಂಖ್ಯೆ 28,10,121ಕ್ಕೆ ಏರಿದೆ. ಸದ್ಯ 32,383 ಸಕ್ರಿಯ ಪ್ರಕರಣಗಳಯ ಬಾಕಿಯುಳಿದಿವೆ. ಈ ದಿನದ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.42ರಷ್ಟಿದ್ದರೆ, ಮರಣ ಪ್ರಮಾಣ ಶೇ. 2.42ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.


    ಎಂದಿನಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಬೆಂಗಳೂರಿನಲ್ಲಿ 462, ದಕ್ಷಿಣ ಕನ್ನಡದಲ್ಲಿ 224, ಮೈಸೂರಿನಲ್ಲಿ 197, ಹಾಸನ 158, ಉಡುಪಿ 110, ಚಿಕ್ಕಮಗಳೂರಿನಲ್ಲಿ 109 ಪ್ರಕರಣಗಳು ದೃಢವಾಗಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿದೆ. ಬೆಂಗಳೂರಿನಲ್ಲಿ ಇಂದು 501 ಸೋಂಕಿತರು ಗುಣಮುಖವಾಗಿದ್ದು, ಸದ್ಯ 12,524 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದು 10 ಸೋಂಕಿತರು ಸೇರಿ ನಗರದಲ್ಲಿ ಒಟ್ಟು 15,771 ಸೋಂಕಿತರು ಸೋಂಕಿಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್)

    ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ! ಮುಂದಾಗಿದ್ದೆಲ್ಲ ರೋಚಕ ಕಥೆ..

    ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಕಮಲ್​ನಾಥ್? ಕುತೂಹಲ ಮೂಡಿಸಿದ ಭೇಟಿ

    ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೂ ಸಿಗಬಹುದು 3 ಲಕ್ಷ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts