More

    ಕಲಬುರಗಿ ಪ್ರವೇಶಕ್ಕೆ ನಿರ್ಬಂಧ: ಪ್ರಿಯಾಂಕ್ ಖರ್ಗೆ ‘ಹಿಟ್ ಆ್ಯಂಡ್ ರನ್‌ ಮಾಸ್ಟರ್’ ಎಂದ ಚಕ್ರವರ್ತಿ ಸೂಲಿಬೆಲೆ

    ಕಲಬುರಗಿ: ಜಿಲ್ಲೆಯ ಕಮಲಾಪೂರ ಬಳಿ ಮಧ್ಯರಾತ್ರಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಪೊಲೀಸರು ತಡೆದಿದ್ದಾರೆ. ಬೀದರ್​​ನಿಂದ ಹೊರಟಿದ್ದ ಸೂಲಿಬೆಲೆ ಅವರನ್ನು 1 ಗಂಟೆಗೆ ತಡೆದ ಪೊಲೀಸರು ವಾಪಾಸ್ ಕಳುಹಿಸಿದ್ದಾರೆ. ಕಲಬುರಗಿ ಪ್ರವೇಶಿಸಲು ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸೂಲಿಬೆಲೆ, ಅವರೊಬ್ಬ ಹಿಟ್ ಆ್ಯಂಡ್ ರನ್ ಮಾಸ್ಟರ್ ಎಂದಿದ್ದಾರೆ.

    ಚಕ್ರವರ್ತಿ ಸೂಲಿಬೆಲೆ ಇಂದು (ಗುರುವಾರ) ಕಲಬುರಗಿಯ ಚಿತ್ತಾಪುರದ ಬಾಪೂ ರಾವ್ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಪ್ರಧಾನಿ‌ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆ ಆಡಳಿತದ ಬಗ್ಗೆ ನಡೆಯಬೇಕಿದ್ದ ಕಾರ್ಯಕ್ರಮ ಇದಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಅನುಮತಿ‌ ನಿರಾಕರಣೆ ಮಾಡಲಾಗಿದೆ. ಏಕಾಏಕಿ ಚಿತ್ತಾಪುರ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಲಾಗಿದೆ.

    ಕಲಬುರಗಿ ಪ್ರವೇಶಕ್ಕೆ ನಿರ್ಬಂಧ: ಪ್ರಿಯಾಂಕ್ ಖರ್ಗೆ 'ಹಿಟ್ ಆ್ಯಂಡ್ ರನ್‌ ಮಾಸ್ಟರ್' ಎಂದ ಚಕ್ರವರ್ತಿ ಸೂಲಿಬೆಲೆ

    ಇದೇ ತಿಂಗಳು ಚಿಕ್ಕಮಗಳೂರು ಹಾಗೂ ರಾಯಚೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಾಕಾರಿಯಾಗಿ ವೈಯಕ್ತಿಕ ನಿಂದನೆ ಮಾಡಿದ ಆರೋಪ ಮತ್ತು ದೂರನ್ನು ಉಲ್ಲೇಖಿಸಿ ಕಾರ್ಯಕ್ರಮಕ್ಕೆ ನಿಷೇಧ ಹೇರಲಾಗಿದೆ.

    ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಆದೇಶ ಹೊರಡಿಸಿದ್ದಾರೆ.

    ಸೂಲಿಬೆಲೆ ಪ್ರಚೋದನಾಕಾರಿ ಭಾಷಣದಿಂದ ಶಾಂತಿ ಧಕ್ಕೆ ಬರುವ ಸಾಧ್ಯತೆ ಎನ್ನುವ ಕಾರಣಕ್ಕೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಇದೇ ವೇಳೆ, ಪೊಲೀಸರು ಮತ್ತು ಸೂಲಿಬಲೆ ಚಕ್ರವರ್ತಿ ನಡುವೆ ತೀವ್ರ ವಾಗ್ವಾದ ನಡೆಯಿತು.

    ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಿಯಾಂಕ್ ಖರ್ಗೆ ಫೈಟರ್ ಅಂತ ತಿಳಿದಿದ್ದೆ. ಆದರೆ, ಈ ರೀತಿ ನನ್ನನ್ನು ಜಿಲ್ಲೆಯೊಳಗೆ ಬರದಂತೆ ತಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್‌ ಮಾಸ್ಟರ್ ಎಂದು ಲೇವಡಿ ಮಾಡಿದ್ದಾರೆ.

    ಒಬ್ಬ ಟೀ ವ್ಯಾಪಾರಿ 1 ವರ್ಷಕ್ಕೆ ಎಷ್ಟು ದುಡಿತಾರೆ ಗೊತ್ತಾ? ಈ ಲೆಕ್ಕಾಚಾರ ನೋಡಿದ್ರೆ ತಲೆ ತಿರುಗೋದು ಪಕ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts