More

    ಭಾರತೀಯ ಋಷಿ ಪರಂಪರೆ ಪ್ರತಿನಿಧಿ ಶ್ರೀಧರರು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ವರದಪುರದ ಮಹಾಯೋಗಿ ಭಗವಾನ ಶ್ರೀ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಧಾರವಾಡದ ಅನ್ವೇಷಣೆ ಕೂಟ ವತಿಯಿಂದ ಇಲ್ಲಿನ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಶ್ರೀಧರ ಸ್ವಾಮಿಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಗುರುವಾರ ಜರುಗಿತು.
    ಶ್ರೀಧರ ಸ್ವಾಮಿಗಳ ವ್ಯಕ್ತಿತ್ವ ಮತ್ತು ಕರ್ತೃತ್ವ ಕುರಿತು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅಮೃತ ಯಾದಿರ್ ಮಾತನಾಡಿ, ಭಾರತೀಯ ಋಷಿ ಪರಂಪರೆ ಪ್ರತಿನಿಧಿಯಾಗಿದ್ದ ಶ್ರೀಧರ ಗುರುವರ್ಯರರ ಸನಾತನ ಪರಂಪರೆ ಬಗೆಗಿನ ವಿವಿಧ ಚಿಂತನೆಗಳು, ಅಷ್ಟ ಪ್ರತಿಜ್ಞೆಗಳನ್ನು ವಿವರಿಸಿದರು. ಸಜ್ಜನಗಡದ ಸ್ವಾಮಿ ಸಮರ್ಥ ರಾಮದಾಸರ ಸಂಪ್ರದಾಯ ಮುಂದುವರಿಸುತ್ತ ಶ್ರೀಧರರು ಮಾಡಿದ ನಿಸ್ಪ–ೃಹ ದೇಶ ಸೇವೆ, ಧರ್ಮ ರಣೆಗಳ ವಿಶೇಷತೆಯ ಮಾಹಿತಿ ನೀಡಿದರು.
    ದತ್ತೋಪಾಸಕ ಆನಂದ ಕುಲಕಣಿರ್ ಅಧ್ಯತೆ ವಹಿಸಿದ್ದರು. ಸುಷ್ಮಾ ಘಾಣೇಕರ ಪ್ರಸ್ತುತ ಪಡಿಸಿದ ಏಕನಾಥರ ಅಭಂಗದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅನ್ವೇಷಣ ಕೂಟದ ಅಧ್ಯ ನರಸಿಂಹ ಪರಾಂಜಪೆ, ಅನಿಲ ಕಾಖಂಡಕಿ, ವೆಂಕಟೇಶ ದೇಸಾಯಿ, ಪ್ರೊ. ದುಷ್ಯಂತ ನಾಡಗೌಡ, ಜಿ.ಆರ್​.ಭಟ್ಟ, ರಾಜೀವ ಪಾಟೀಲ ಕುಲಕಣಿರ್, ಎಚ್​.ವಿ.ಕಾಖಂಡಕಿ, ಅನಂತ ಥಿಟೆ, ವಿ.ಎಸ್​. ಕುಲಕಣಿರ್, ಶ್ರೀಪಾದ ನಾಡಗೀರ, ಬಿ.ಜಿ.ಗುಂಡೂರ, ಎಸ್​.ಎಸ್​.ಬಂಗಾರಿಮಠ, ಪ್ರೊ. ಸಿ.ಆರ್​.ಜೋಶಿ, ಎಂ.ಬಿ.ಸದಾನಂದ, ಗುರುಪ್ರಸಾದ ಹೆಗಡೆ, ಅನಂತ ಸಿದ್ಧೇಶ್ವರ, ಮಹಾಬಲೇಶ್ವರ ಸಿಂದಗಿ, ನರಹರಿ ಕೆ.ಎನ್​., ಎಸ್​.ವಿ.ನಾಯಕ, ಡಾ. ಮಂದಾಕಿನಿ ಪುರೋಹಿತ, ಮಂಗಲ ಾಟಕ, ಶೋಭಾ ದೇಶಪಾಂಡೆ, ಸಹನಾ ಕನಕಾಪುರ, ಗೀತಾ ಆಲೂರ, ಸೀಮಾ ಪರಾಂಜಪೆ, ಶುಭದಾ ಘಾಣೇಕರ, ಪ್ರತಿಭಾ ಗೋಡಬೋಲೆ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts