More

    ತಮಿಳುನಾಡು ವಿರುದ್ಧದ ಪಂದ್ಯಕ್ಕೆ ನಾಯಕ ಮಯಾಂಕ್​ ಅಗರ್ವಾಲ್​ ಫಿಟ್​

    ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ರಾಜ್ಯ ತಂಡದ ಪಾಲಿಗೆ ಗುಡ್​ನ್ಯೂಸ್​ ಸಿಕ್ಕಿದೆ. ಅಗರ್ತಲದಿಂದ ಸೂರತ್​ಗೆ ಪ್ರಯಾಣ ಬೆಳೆಸುವಾಗ ವಿಮಾನದಲ್ಲಿ ದಿಢೀರ್​ ಅಸ್ವಸ್ಥಗೊಂಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್​ ತಂಡದ ನಾಯಕ ಮಯಾಂಕ್​ ಅಗರ್ವಾಲ್​ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಐದನೇ ಸುತ್ತಿನಲ್ಲಿ ಚೆನ್ನೆ$ನಲ್ಲಿ ನಡೆಯಲಿರುವ ತಮಿಳುನಾಡು ವಿರುದ್ಧದ ಮಹತ್ವದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಸಂಪೂರ್ಣ ಫಿಟ್​ ಆಗಿದ್ದಾರೆ. ಭಾರತ ಎ ತಂಡದ ಕರ್ತವ್ಯಕ್ಕೆ ತೆರಳಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಸಹ ಪಂದ್ಯಕ್ಕೆ ಲಭ್ಯರಿದ್ದು ರಾಜ್ಯದ ಬಲ ಮತ್ತಷ್ಟು ಹೆಚ್ಚಿಸಿದೆ.

    ಸಿ ಗುಂಪಿನ ಅಗ್ರಸ್ಥಾನಕ್ಕಾಗಿ ಎರಡು ತಂಡಗಳು ಕಾದಾಟ ನಡೆಸಲಿದ್ದು, ಕರ್ನಾಟಕ ತಂಡ 2 ಬದಲಾವಣೆ ಮಾಡಿದೆ. ಡಿ.ನಿಶ್ಚಲ್​ ಹಾಗೂ ಎಡಗೈ ವೇಗಿ ಅಭಿಲಾಷ್​ ಶೆಟ್ಟಿ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಅವರ ಸ್ಥಾನಕ್ಕೆ ಮಯಾಂಕ್​ ಅಗರ್ವಾಲ್​ ಮತ್ತು ದೇವದತ್​ ಪಡಿಕ್ಕಲ್​ ತಂಡಕ್ಕೆ ಮರಳಿದ್ದಾರೆ. ತ್ರಿಪುರ ವಿರುದ್ಧದ ಪಂದ್ಯದ ಬಳಿಕ ರೈಲ್ವೇಸ್​ ವಿರುದ್ಧದ ಪಂದ್ಯಕ್ಕಾಗಿ ವಿಮಾನ ಹತ್ತಿದ ಮಯಾಂಕ್​ ಅಗರ್ವಾಲ್​ ಸೀಟಿನ ಮುಂಭಾಗದ ಪೌಚ್​ನಲ್ಲಿದ್ದ ದ್ರವವನ್ನು ಸೇವಿಸಿ ಅಸ್ವಸ್ಥರಾಗಿದ್ದರು ಇದರಿಂದ ರೈಲ್ವೇಸ್​ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ವೈದ್ಯರಿಂದ ಹಸಿರು ನಿಶಾನೆ ಪಡೆದಿರುವ 32 ವರ್ಷದ, ಮಯಾಂಕ್​ ಹಾಲಿ ಋತುವಿನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಶತಕ ಸಹಿತ 310 ರನ್​ ಬಾರಿಸಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ರಾಜ್ಯದ ಪರ ಕಣಕ್ಕಿಳಿದಿದ್ದ ದೇವದತ್​ ಪಡಿಕ್ಕಲ್​ 2 ಶತಕ ಸಹಿತ 369 ರನ್​ ಸಿಡಿಸಿದ್ದಾರೆ. ೆ.9 ರಿಂದ ರಣಜಿ ಟ್ರೋಫಿ ಐದನೇ ಸುತ್ತಿನ ಪಂದ್ಯಗಳು ಆರಂಭವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts