More

    ಉಳಿತಾಯ, ಚಾಲ್ತಿ ಖಾತೆಗಳ ಅಭಿಯಾನ

    ಮಂಗಳೂರು: ಕರ್ಣಾಟಕ ಬ್ಯಾಂಕ್ ಮಂಗಳವಾರ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಅಭಿಯಾನ ಆರಂಭಿಸಿತು. ಈ ಅಭಿಯಾನ 2021ರ ಮಾರ್ಚ್ 4ಕ್ಕೆ ಅಂತ್ಯಗೊಳ್ಳಲಿದೆ.

    ಅಭಿಯಾನಕ್ಕೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಮಾತನಾಡಿ, ಈವರೆಗೂ ಬ್ಯಾಂಕಿಂಗ್ ಸೌಲಭ್ಯ ಹೊಂದಿರದ ನೂತನ ಗ್ರಾಹಕರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು ಮತ್ತು ನವ ಪೀಳಿಗೆಯ ಆಶೋತ್ತರಗಳಿಗೆ ಸ್ಪಂದಿಸಿ ಡಿಜಿಟಲ್ ತಂತ್ರಜ್ಞಾನ ಸಂಪನ್ನ ಬ್ಯಾಂಕಿಂಗ್ ಉತ್ಪನ್ನಗಳನ್ನು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಚಯಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದರು.

    ಅಭಿಯಾನದಲ್ಲಿ ಬ್ಯಾಂಕ್ 4,10,000 ನೂತನ ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ತೆರೆಯುವುದರೊಂದಿಗೆ 650 ಕೋಟಿ ರೂ. ಗಳ ಹೆಚ್ಚುವರಿ ಠೇವಣಿಯನ್ನು ಕ್ರೋಢೀಕರಿಸಲಿದೆ. ಇದಕ್ಕಾಗಿ ದೇಶದಾದ್ಯಂತ ವ್ಯಾಪಿಸಿರುವ 859 ಶಾಖೆಗಳ ಸುಮಾರು 8 ಸಾವಿರಕ್ಕೂ ಮಿಕ್ಕಿದ ಸಿಬ್ಬಂದಿ ವರ್ಗ ಅಹರ್ನಿಶಿ ಶ್ರಮಿಸಲಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

    ಟ್ಯಾಬ್ ಬ್ಯಾಂಕಿಂಗ್: ಟ್ಯಾಬ್ ಬ್ಯಾಂಕಿಂಗ್ ಎನ್ನುವ ನೂತನ ವ್ಯವಸ್ಥೆಯನ್ನು ಕರ್ಣಾಟಕ ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಲಿದೆ. ಈ ಸೌಲಭ್ಯದಿಂದ ಗ್ರಾಹಕರು ಟ್ಯಾಬ್ ಮುಖಾಂತರವೇ ಖಾತೆ ತೆರೆಯಬಹುದು ಎಂದು ಮಹಾಬಲೇಶ್ವರ ಎಂ.ಎಸ್ ಹೇಳಿದರು. ಬ್ಯಾಂಕ್ ತನ್ನ ಡಿಜಿಟಲ್ ಚಾನೆಲ್‌ಗಳ ಮೂಲಕ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್(ಕೆಬಿಎಲ್ ಮೊಬೈಲ್ ಪ್ಲಸ್), ಕೆಬಿಎಲ್ ಭೀಮ್ ಯುಪಿಐ ಆ್ಯಪ್ ಇತ್ಯಾದಿ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಕೇವಲ 125 ರೂ (ಜಿಎಸ್ಟಿ ಪ್ರತ್ಯೇಕ) ಅತ್ಯಂತ ಕಡಿಮೆ ದರದ ಪ್ರೀಮಿಯಂನಲ್ಲಿ ಒದಗಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts