More

    ಕತಾರ್​ನಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟ ಆಯೋಜಿಸಿದ ಕರ್ನಾಟಕ ಸಂಘ

    ಕತಾರ್​: ಕರ್ನಾಟಕ ಸಂಘ ಕತಾರ್ ಸಾಂಪ್ರದಾಯಿಕ ಚೌಕ ಬಾರಾ ಹಾಗೂ ಅಳುಗುಳಿಮಣೆ ಆಟಗಳ ಮೂಲಕ ವಾರ್ಷಿಕ ಒಳಾಂಗಣ ಕ್ರೀಡಾಕೂಟ-2022 ಆಯೋಜಿಸಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಕತಾರ್​​ನಲ್ಲಿನ ಕರ್ನಾಟಕ ಸಂಘ ಈ ವಾರ್ಷಿಕ ಒಳಾಂಗಣ ಕ್ರೀಡಾಕೂಟಗಳನ್ನು ನಡೆಸಿತು.

    ಕರ್ನಾಟಕದ ಸಾಂಪ್ರದಾಯಿಕ ಆಟಗಳಾದ ಚೌಕಾ ಬಾರಾ ಮತ್ತು ಅಳುಗುಳಿಮಣೆ ಆಟಗಳಲ್ಲಿ ದೋಹದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಕಿರಿಯ ಮತ್ತು ವಯಸ್ಕರು ಭಾಗವಹಿಸಿದರು. ಕ್ರೀಡಾಕೂಟದ ಇತರ ಕ್ರೀಡೆಗಳಲ್ಲಿ ಚದುರಂಗ, ಕೇರಂ ಮತ್ತು ಟೇಬಲ್ ಟೆನ್ನಿಸ್ ಆಟಗಳೂ ಇದ್ದವು. ಕ್ರೀಡಾಕೂಟದಲ್ಲಿ ದಾಖಲೆಯ 150ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು.

    ಒಳಾಂಗಣ ಕ್ರೀಡೆಗಳ ರೋಮಾಂಚಕ ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ಕ್ರೀಡಾ ಕೇಂದ್ರದ ಪ್ರತಿನಿಧಿ ಅನಿಲ್ ಬೋಳೂರು, ಭಾರತೀಯ ಸಾಂಸ್ಕೃತಿಕ ಹಿತೈಷಿ ವೇದಿಕೆಯ ಪ್ರತಿನಿಧಿ ದಿನೇಶ್ ಗೌಡ, ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷ ಡಾ. ಸಂಜಯ್ ಕುದ್ರಿ ಮತ್ತು ಅರುಣ್ ಕುಮಾರ್ ಹಾಗೂ ಕತಾರ್‌ನ ಅಖಿಲ ಕರ್ನಾಟಕ ಮೂಲದ ಸಂಘಗಳ ಅಧ್ಯಕ್ಷರು ಹಾಗೂ ಇತರ ಸಂಘಗಳ ಗಣ್ಯರು ಭಾಗವಹಿಸಿದ್ದರು.

    ಕತಾರ್​ನಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟ ಆಯೋಜಿಸಿದ ಕರ್ನಾಟಕ ಸಂಘ

    ಮುಂಬರುವ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಕರ್ನಾಟಕ ಸಂಘ ಕತಾರ್ ಬದ್ಧವಾಗಿದೆ ಎಂದು ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಮಹೇಶ್ ಗೌಡ ಸಭೆಯಲ್ಲಿ ತಿಳಿಸಿದರು. ವಿಜೇತರಿಗೆ ಟ್ರೋಫಿಗಳನ್ನು ವಿತರಿಸಲಾಯಿತು. ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹದಿಂದ ಆಜಾದಿ ಕಿ ಅಮೃತ್ ಮಹೋತ್ಸವದ ಅಂಗವಾಗಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಲ್ಲಿ ಕರ್ನಾಟಕ ಸಂಘ ಕತಾರ್ ಪ್ರತಿನಿಧಿಗಳಾದ ಸದಸ್ಯರನ್ನು ಸನ್ಮಾನಿಸಲಾಯಿತು.

    ಕತಾರ್​ನಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟ ಆಯೋಜಿಸಿದ ಕರ್ನಾಟಕ ಸಂಘ ಕತಾರ್​ನಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟ ಆಯೋಜಿಸಿದ ಕರ್ನಾಟಕ ಸಂಘ ಕತಾರ್​ನಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟ ಆಯೋಜಿಸಿದ ಕರ್ನಾಟಕ ಸಂಘ

    ಸಮಾರೋಪ ಸಮಾರಂಭವನ್ನು ಕರ್ನಾಟಕ ಸಂಘ ಕತಾರ್‌ನ ಕ್ರೀಡಾ ಕಾರ್ಯದರ್ಶಿ ಜಾಕೀರ್ ಅಹಮದ್ ನಿರ್ವಹಿಸಿದರು ಮತ್ತು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಿಲೀಪ್ ಸಭೆಗೆ ಧನ್ಯವಾದಗಳನ್ನು ಸಲ್ಲಿಸಿದರು.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts