More

    ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ಎದುರು ಸುಲಭ ಜಯ ದಾಖಲಿಸಿದ ಕರ್ನಾಟಕ

    ವಿಜಯವಾಣಿ ಸುದ್ದಿಜಾಲ,ಬೆಂಗಳೂರು : ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ (152ರನ್, 140 ಎಸೆತ, 14 ಬೌಂಡರಿ, 5 ಸಿಕ್ಸರ್) ಬಿರುಸಿನ ಶತಕದಾಟದ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್.ಸಮರ್ಥ್ ಪಡೆ 101 ರನ್‌ಗಳಿಂದ ಒಡಿಶಾ ತಂಡವನ್ನು ಸೋಲಿಸಿತು. ಕಳೆದ ಪಂದ್ಯದಲ್ಲಿ ಕರ್ನಾಟಕ ತಂಡ, ಬಿಹಾರ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಕರ್ನಾಟಕ ಎರಡು ಜಯ, ಒಂದು ಸೋಲು ಕಂಡಿದ್ದು, ಎಲೈಟ್ ಸಿ ಗುಂಪಿನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ.

    ಇದನ್ನೂ ಓದಿ: ಅಭಿಮಾನಿಗಳ ವರ್ತನೆಗೆ ಕ್ಷಮೆಕೋರಿದ ಡಿಬಾಸ್

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಪಡಿಕಲ್ ಹಾಗೂ ನಾಯಕ ಆರ್.ಸಮರ್ಥ್ (60ರನ್, 83 ಎಸೆತ, 4 ಬೌಂಡರಿ) ಜೋಡಿ ಮೊದಲ ವಿಕೆಟ್‌ಗೆ 140 ಜತೆಯಾಟದ ಲವಾಗಿ 5 ವಿಕೆಟ್‌ಗೆ 329ರನ್ ಪೇರಿಸಿತು. ಬಳಿಕ ಈ ಬೃಹತ್ ಮೊತ್ತ ಬೆನ್ನಟ್ಟಿದ ಒಡಿಶಾ ತಂಡ, ಪ್ರಸಿದ್ಧ್ ಕೃಷ್ಣ (46ಕ್ಕೆ 3) ಮಾರಕ ದಾಳಿಗೆ ನಲುಗಿ 44 ಓವರ್‌ಗಳಲ್ಲಿ 228 ರನ್‌ಗಳಿಗೆ ಸರ್ವಪತನ ಕಂಡಿತು.

    ಕರ್ನಾಟಕ: 5 ವಿಕೆಟ್‌ಗೆ 329 (ಆರ್.ಸಮರ್ಥ್ 60, ದೇವದತ್ ಪಡಿಕಲ್ 152, ಕೆವಿ ಸಿದ್ಧಾರ್ಥ್ 41, ಮಿಥುನ್ 40*, ಸೂರ್ಯಕಾಂತ್ ಪ್ರಧಾನ್ 53ಕ್ಕೆ 2, ಹರ್ಷಿತ್ ರಾಥೋಡ್ 80ಕ್ಕೆ 2), ಒಡಿಶಾ: 44 ಓವರ್‌ಗಳಲ್ಲಿ 228 (ಸುಬ್ರಾಂಶು ಸೆನಾಪತಿ 78, ಅಂಕಿತ್ ಯಾದವ್ 56, ಸಂದೀಪ್ ಪಟ್ನಾಯಕ್ 28, ಪ್ರಸಿದ್ಧ್ ಕೃಷ್ಣ 46ಕ್ಕೆ 3, ಶ್ರೇಯಸ್ ಗೋಪಾಲ್ 47ಕ್ಕೆ 3, ವೈಶಾಕ್ ವಿಜಯ್ ಕುಮಾರ್ 35ಕ್ಕೆ 1, ಸುಚಿತ್ 33ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts