More

    ನಾಪತ್ತೆಯಾದ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ …

    ಮುಂಬೈ: ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿಗೆ ಹೋಗಿರಬಹುದು? ಎಂದು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಇದೀಗ ತಲೆ ಕೆಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ಚಿತ್ರದ ಹಾಡಿಗೆ ಧ್ವನಿಯಾದ ತಮಿಳು ನಟ ಧನುಷ್​

    ಬಾಲಿವುಡ್​ ಮತ್ತು ಡ್ರಗ್ಸ್​ ಮಾಫಿಯಾ ನಂಟಿನ ಕುರಿತಾಗಿ ಈ ಹಿಂದೆ ದೀಪಿಕಾ ಮತ್ತು ಕರಿಷ್ಮಾ ಅವರಿಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್​ ಕೊಟ್ಟಿದ್ದರು. ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಎರಡನೆಯ ಹಂತವಾಗಿ, ಮಂಗಳವಾರ ಎನ್​ಸಿಬಿ ಅಧಿಕಾರಿಗಳು, ಕರಿಷ್ಮಾ ಅವರ ಮನೆ ರೇಡ್​ ಮಾಡಿದ್ದರು.

    ಈ ಸಂದರ್ಭದಲ್ಲಿ ಕರಿಷ್ಮಾ ಇಲ್ಲದಿದ್ದರೂ, ಅವರ ಮನೆಯಲ್ಲಿ 1.7 ಗ್ರಾಂ ಚರಸ್​ ಮತ್ತು ಎರಡು ಬಾಟಲಿ ಸಿಬಿಡಿ ಆಯಿಲ್​ ಸಿಕ್ಕಿದ್ದವು. ಈ ಕುರಿತು ಹೆಚ್ಚಿನ ತನಿಖೆಗೆ ಹಾಜರಾಗುವುದಕ್ಕೆ ಕರಿಷ್ಮಾಗೆ ಸಮನ್ಸ್​ ಕಳುಹಿಸಲಾಗಿತ್ತು. ಆದರೆ, ಕರಿಷ್ಮಾ ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಅಷ್ಟೇ ಅಲ್ಲ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಮೊಮ್ಮಗ ಬಂದಿದ್ದು ಸಮುದ್ರಮಂಥನ ಆಗಿ ಕ್ಷೀರಸಾಗರದಿಂದ ಅಮೃತ ಸಿಕ್ಕಂತಾಗಿದೆ: ಸುಂದರ್​ ರಾಜ್​

    ಹಾಗಾದರೆ, ಕರಷ್ಮಾ ಹೋಗಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಯೊಂದು ಇದೀಗ ಎಲ್ಲರನ್ನೂ ಕಾಡುತ್ತಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ.

    ಚಿತ್ರಮಂದಿರಗಳಲ್ಲಿ ಬಿಡಿ, ಟಿವಿಯಲ್ಲೂ ಫ್ಲಾಪ್​ ಆಯ್ತು ಪ್ರಭಾಸ್​ ಅಭಿನಯದ ‘ಸಾಹೋ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts