More

    ಕರಿಪ್ಪೂರ್ ವಿಮಾನ ದುರಂತ ಸಾವಿನ ಸಂಖ್ಯೆ 19ಕ್ಕೆ ಏರಿಕೆ: ಬ್ಲ್ಯಾಕ್​ಬಾಕ್ಸ್​ ಪತ್ತೆ

    ತಿರುವನಂತಪುರ: ಕೇರಳದ ಕೋಯಿಕ್ಕೋಡಿನ ಕರಿಪ್ಪೂರ್​ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಫ್ಲೈಟ್​ ರಾಡಾರ್ 24ರ ಪ್ರಕಾರ ವಿಮಾನ ಎರಡು ಬಾರಿ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಪ್ರಯತ್ನಿಸಿತ್ತು.

    ಘಟನಾ ಸ್ಥಳದಲ್ಲೇ 17 ಜನ ಸಾವನ್ನಪ್ಪಿದರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 110 ಜನ ಕೋಯಿಕ್ಕೋಡ್ ಆಸ್ಪತ್ರೆಯಲ್ಲೂ 80 ಜನ ಮಲಪ್ಪುರಂ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರು ಗರ್ಭಿಣಿ, ನಾಲ್ವರು ಮಕ್ಕಳು ಸೇರಿ 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಯಾನ ಸಚಿವರು, ಕೇರಳದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಇತರೆ ಸಚಿವರು ಆಗಮಿಸುತ್ತಿದ್ದು, ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.

    ಇದನ್ನೂ ಓದಿ: ಭಾರತದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳು

    ಈ ನಡುವೆ ಪತನಗೊಂಡ ವಿಮಾನದ ಬ್ಲ್ಯಾಕ್​ಬಾಕ್ಸ್ ಪತ್ತೆಯಾಗಿದೆ. ಡಿಜಿಟಲ್​ ಫ್ಲೈಟ್​ ಡೇಟಾ ರೆಕಾರ್ಡರ್​ ಕೂಡ ಪತ್ತೆಯಾಗಿದೆ. ಕಾಕ್​ಪಿಟ್ ವಾಯ್ಸ್ ರೆಕಾರ್ಡರ್ ಸಂಗ್ರಹಿಸುವುದಕ್ಕೆ ಪ್ರಯತ್ನಿಸಲಾಗುತ್ತಿದ್ದು, ವಿಮಾನದ ಫ್ಲೋರ್​ಬೋರ್ಡ್​ ತುಂಡಾಗಿರುವ ಕಾರಣ ಕಷ್ಟವಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಜೋಡಿ ದುರಂತ ಕೇರಳಕ್ಕೆ ಆಘಾತ: 2 ಹೋಳಾದ ವಿಮಾನ, ಭೂಕುಸಿತಕ್ಕೆ 13 ಮಂದಿ ಜೀವಂತ ಸಮಾಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts