More

    ಕರೊನಾ ಮಧ್ಯೆಯೂ ನಡೆದ ನಾಗಪಂಚಮಿ

    ದೇವರಹಿಪ್ಪರಗಿ: ಮಹಾಮಾರಿ ಕರೊನಾ ಮಧ್ಯೆಯೂ ಗ್ರಾಮೀಣ ಭಾಗದ ಜನತೆ ಪ್ರತಿ ವರ್ಷದಂತೆ ನಾಗಪಂಚಮಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.
    ಸುಮಂಗಲಿಯರು, ಮಕ್ಕಳು ನಾನಾ ತರಹದ ಸಿಹಿ ತಿಂಡಿಯನ್ನು ಮಾಡಿಕೊಂಡು ನಾಗರಕಟ್ಟೆಗೆ ತೆರಳಿ ನಾಗಪ್ಪನ ಮೂರ್ತಿಗೆ ನೂಲಿನ ದಾರ ಹಾಕಿ ಹಾಲೆರೆದು ನೈವೇದ್ಯ ನೀಡಿ ಭಕ್ತಿ ಸಮರ್ಪಿಸುವುದು ಕಂಡುಬಂತು. ವಿವಿಧ ಭಾಗಗಳಲ್ಲಿ ಮರದ ಕೊಂಬೆಗೆ, ಮನೆಯ ಜಂತಿಗಳಿಗೆ ಜೋಕಾಲಿ ಕಟ್ಟಿ ಉಯ್ಯಲೆ ಆಡುತ್ತಾ ಸಂಭ್ರಮಿಸಿದರು.
    ಗಂಡು ಮಕ್ಕಳ ಶಕ್ತಿ ಪ್ರದರ್ಶನ ಗಮನ ಸೆಳೆಯಿತು. ಅದರಲ್ಲೂ ಭಾರ ಎತ್ತಿಕೊಂಡು ದೂರ ನಡೆದುಕೊಂಡು ಹೋಗುವುದು, ನಿಂಬೆ ಹಣ್ಣು ಎಸೆಯುವುದು, ಆ ಓಣಿಯಿಂದ ಈ ಓಣಿಯವರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಬುದ್ಧಿವಂತಿಕೆಯಿಂದ ಹೇಳಿದ ಸ್ಥಳ ಮುಟ್ಟಿ ಷರತ್ತು ಗೆಲ್ಲುವುದು, ಗೆದ್ದ ವ್ಯಕ್ತಿಯನ್ನು ಹಾಡಿ-ಹೊಗಳುವುದು ಕಂಡು ಬಂದಿತು.

    ಕರೊನಾ ಸಂಕಷ್ಟದಲ್ಲೂ ಧರ್ಮಾಚರಣೆಯನ್ನು ನಿಲ್ಲಿಸದೆ ಗ್ರಾಮೀಣ ಪ್ರದೇಶದಲ್ಲಿ ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡೋಣ.
    ವೀರಗಂಗಾಧರ ಶ್ರೀಗಳು, ಸದಯ್ಯನಮಠ, ದೇವರಹಿಪ್ಪರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts