More

    ವಿಜಯವಾಣಿ-ದಿಗ್ವಿಜಯ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ

    ಧಾರವಾಡ: ಭಾರತದ ಗಡಿ ನುಗ್ಗಿದ್ದ ಪಾಕಿಸ್ತಾನಿ ಸೈನಿಕರನ್ನು ಹೊಡೆದೋಡಿಸಿದ ಭಾರತೀಯ ಸೈನಿಕರ ಶ್ರಮ ಹಾಗೂ ಬಲಿದಾನವನ್ನು ಸ್ಮರಿಸುವ ದಿನ 1999 ಜುಲೈ 26. ಕಾರ್ಗಿಲ್ ಯುದ್ಧ ಗೆದ್ದ ಪ್ರಯುಕ್ತ ದೇಶಾದ್ಯಂತ ‘ಆಪರೇಶನ್ ವಿಜಯ್’ ಹೆಸರಿನಲ್ಲಿ ಸಂಭ್ರಮಿಸಲಾಗುತ್ತದೆ.

    ಭಾರತೀಯ ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಈ ದಿನವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ನಗರದ ‘ಮೈ ದೇಶ್ ೌಂಡೇಶನ್’ನಿಂದ 2ಕೆ ರನ್ ಆಯೋಜಿಸಲಾಗಿದೆ.

    ಜು. 23ರಂದು ಬೆಳಗ್ಗೆ 7.30ಕ್ಕೆ ಇಲ್ಲಿನ ಕರ್ನಾಟಕ ಕಾಲೇಜು ವೃತ್ತದಲ್ಲಿ (ಕೆಸಿಡಿ) 2ಕೆ (2 ಕಿ.ಮೀ. ಓಟ)ರನ್‌ಗೆ ಗಣ್ಯರು ಚಾಲನೆ ನೀಡಲಿದ್ದಾರೆ. ಅಲ್ಲಿಂದ ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ, ಕೇಂದ್ರ ಗ್ರಂಥಾಲಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದವರೆಗೆ 2ಕೆ ರನ್ ಸಾಗಲಿದೆ.

    ಯುವಜನತೆಯಲ್ಲಿ ದೇಶಸೇವೆಯ ಜಾಗೃತಿ ಮೂಡಿಸುವ ಉದ್ದೇಶದಿಂದ 2ಕೆ ರನ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ಸುದ್ದಿವಾಹಿನಿಯ ಸಹಯೋಗ ಇರಲಿದೆ. ಜತೆಗೆ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿ ಹಾಗೂ ಗ್ರಾಮ ವಿಕಾಸ ಸಂಸ್ಥೆ ಸಹಕಾರ ನೀಡಿವೆ.

    ಯೋಧರ ಸಮಾಗಮ- ಸನ್ಮಾನ

    ಭಾರತೀಯ ಸೈನಿಕರು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರಿಗೆ ಈ ಕಾರ್ಯಕ್ರಮ ಅರ್ಪಿತ. ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿವೀರ್’ ಸೈನಿಕ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಪದಾಧಿಕಾರಿಗಳು, ಮಾಜಿ ಹಾಗೂ ಹಾಲಿ ಯೋಧರು ಪಾಲ್ಗೊಳ್ಳುವರು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರು ಮತ್ತು ಅವರ ಕುಟುಂಬದವರು ಭಾಗವಹಿಸುವರು. ಅಂದು ಕೆಸಿಡಿ ವೃತ್ತದಲ್ಲಿ ಕಾರ್ಗಿಲ್ ಮಾಜಿ ಯೋಧರನ್ನು ಸನ್ಮಾನಿಸಿ, ಗೌರವಿಸಲಾಗುವುದು.

    ನೋಂದಣಿಗೆ ಅವಕಾಶ

    ವಿಜಯವಾಣಿ-ದಿಗ್ವಿಜಯ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ

    ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುವಕರು ಹೆಚ್ಚಿನ ಆಸಕ್ತಿ ತೋರಿದ್ದು, ಈಗಾಗಲೇ ಸುಮಾರು 600 ಜನ ನೋಂದಣಿ ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸಕ್ತರು https://docs.google.com/forms/d/e/1FAIpQLSeOVTyIbwZP4voqo-TAln68NwcqJyd0m0sEY4ovelFSP1jjqA/viewform?pli=1 ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಕ್ಯುಆರ್ ಕೋಡ್ ಬಳಸಬಹುದು. ನಿಗದಿತ ಸಮಯಕ್ಕೆ ಆಗಮಿಸಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು 2ಕೆ ರನ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ಮಾಹಿತಿಗೆ ಮೊ: 8073123711 ಅಥವಾ 9742511517 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts